ಕಲಘಟಗಿ: ಮಕ್ಕಳ ಆಸಕ್ತಿಗೆ ಅನುಗುಣವಾಗಿ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಶಿಕ್ಷಣ ನೀಡಿದರೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ ತಿಳಿಸಿದರು.
ಪಟ್ಟಣದ ಜನತಾ ಇಂಗ್ಲಿಷ್ ಶಾಲೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಹಮ್ಮಿಕೊಂಡಿದ್ದ ಕಮ್ಯುನಿಟಿ ಡೇ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಕುಮಾರ ಕೆ.ಎಫ್. ಮಾತನಾಡಿ, ‘ವಾಸ್ತವಕ್ಕೆ ಹತ್ತಿರವಾಗಿರುವ ಮತ್ತು ಮಕ್ಕಳಲ್ಲಿನ ಕಲ್ಪನೆಗಳಿಗೆ ಇಂತಹ ಲ್ಯಾಬ್‌ಗಳು ಅಗತ್ಯವಾಗಿದ್ದು, ಅನ್ವೇಷಣೆಗಳಿಗೆ ಪೇಟೆಂಟ್ ಪಡೆದು ದೇಶದ ಸಂಶೋಧನಾ ಕ್ಷೇತ್ರಕ್ಕೆ ಪರಿಚಯಿಸಲು ಮುಂದಾಗಬೇಕು’ ಎಂದರು.
ಸಂಸ್ಥೆ ಚೇರ್ಮನ್ ನಂದೀಶ ಪಾಟೀಲ, ‘ನಿಗದಿತ ಪಠ್ಯಕ್ರಮಕ್ಕಿಂತ ವಿದ್ಯಾರ್ಥಿಗಳ ಆಸಕ್ತಿಗೆ ಪೂರಕವಾಗಿ ಶಿಕ್ಷಣ ನೀಡುವುದು ಅಗತ್ಯವಾಗಿದೆ. ನಮ್ಮ ಶಾಲೆಯ ಅಟಲ್ ಟಿಂಕರಿಂಗ್ ಪ್ರಯೋಗಾಲಯ ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿವೆ’ ಎಂದರು.
ಮುಖ್ಯ ಶಿಕ್ಷಕ ಎಸ್.ಕೆ. ಪಾಟೀಲ ಕುಲಕರ್ಣಿ, ಕೆ.ಐ.ಕೊಂಗಿ, ವಿಜ್ಞಾನ ಶಿಕ್ಷಕಿ ರೂಪಾ ಕಾಗಿನೆಲಿ, ಸುಬ್ರಮಣ್ಯ ಸತ್ತಿಗೇರಿ, ಬಿ.ಎಸ್. ದೇವರಮನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.