ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಕಳದ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಕರ್ನಾಟಕ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಈಜು ಚಾಂಪಿಯನ್‌ಷಿಪ್‌
Last Updated 24 ಸೆಪ್ಟೆಂಬರ್ 2019, 12:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸ್ಪರ್ಧೆಯ ಎರಡೂ ದಿನ ಉತ್ತಮ ಪ್ರದರ್ಶನ ನೀಡಿದ ಭಟ್ಕಳದ ಅಂಜುಮನ್‌ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ತಂಡ ನಗರದಲ್ಲಿ ಮಂಗಳವಾರ ಮುಕ್ತಾಯವಾದ ಕರ್ನಾಟಕ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಈಜು ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಜಯಿಸಿತು.

ರಾಜನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಆತಿಥ್ಯ ವಹಿಸಿದ್ದ ಟೂರ್ನಿಯಲ್ಲಿ ಭಟ್ಕಳ ಕಾಲೇಜಿನ ಸ್ಪರ್ಧಿಗಳು ಒಟ್ಟು 58 ಪಾಯಿಂಟ್ಸ್‌ ಕಲೆಹಾಕಿದರೆ, ಹುಬ್ಬಳ್ಳಿಯ ಕೆಎಲ್‌ಇ ಕಾಡಸಿದ್ದೇಶ್ವರ ಕಾಲೇಜು ತಂಡ 69 ಪಾಯಿಂಟ್ಸ್‌ ಕಲೆಹಾಕಿ ಮಹಿಳಾ ವಿಭಾಗದ ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಆಕ್ಸ್‌ಫರ್ಡ್‌ ಕಾಲೇಜಿನ ವರುಣ ಬಸನಗೌಡರ ಹಾಗೂ ಕಾಡಸಿದ್ದೇಶ್ವರ ಕಾಲೇಜಿನ ಋತ್ವಿಕಾ ಹುಲ್ಲೂರು ವೈಯಕ್ತಿಕ ಪ್ರಶಸ್ತಿ ಜಯಿಸಿದರು.

ಇಲ್ಲಿ ಉತ್ತಮ ಪ್ರದರ್ಶನ ನೀಡಿದ ಈಜುಪಟುಗಳನ್ನು ಅಂತರ ವಿ.ವಿ. ಟೂರ್ನಿಗೆ ಆಯ್ಕೆ ಮಾಡಲಾಗುತ್ತದೆ. ರಾಜನಗರ ಕಾಲೇಜಿನ ಪ್ರಾಚಾರ್ಯ ಡಾ. ಪಿ.ಬಿ. ಕಲ್ಯಾಣಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕ ಸೋಮಶೇಖರ ಪಟ್ಟಣಶೆಟ್ಟಿ, ಪ್ರೊ. ರಾಮಕೃಷ್ಣ ನಾಯಕ, ಗೋಪಾಲ ದಿವಟೆ, ಪ್ರೊ.ಪ್ರಸನ್ನ ಪಂಢರಿ, ರಘು ಅಕಮಂಚಿ, ವಸಂತ ಮುಂಡರಗಿ, ಪ್ರೊ. ರಾಜೇಶ್ವರಿ ಹೊರಕೇರಿ, ಕ.ವಿ.ವಿ. ಈಜು ತಂಡ ಆಯ್ಕೆ ಸಮಿತಿ ಸದಸ್ಯ ಕಿರಣ ಹಿರೇಮಠ ಇದ್ದರು.

ಮಂಗಳವಾರದ ಫಲಿತಾಂಶ:

50ಮೀ. ಫ್ರೀಸ್ಟೈಲ್‌: ವಿಘ್ನೇಶ (ಎಸ್‌ಡಿಎಂ ಕಾಲೇಜು, ಹೊನ್ನಾವರ; 32.53ಸೆ.)–1, ಅಶ್ಫಿಕ್‌ (ಅಂಜುಮನ್‌ ಕಾಲೇಜು)–2, ಸಚಿನ (ಜೆಎಂಜೆ ಕಾಮರ್ಸ್‌ ಕಾಲೇಜು, ಶಿರಸಿ)–3.

200 ಮೀ. ಬಟರ್‌ಫ್ಲೈ: ಮನೀಷ ಭಜಂತ್ರಿ (ಆಕ್ಸ್‌ಫರ್ಡ್‌ ಕಾಲೇಜು, ಹುಬ್ಬಳ್ಳಿ; 4ನಿ.48.47ಸೆ.)–1, ಮೊಹಮ್ಮದ್‌ ಅಫ್ನಾನ್‌ (ಅಂಜುಮನ್‌ ಕಾಲೇಜು, ಭಟ್ಕಳ)–2, ಜೀಶನ್‌ (ಅಂಜುಮನ್‌ ಕಾಲೇಜು)–3.

50ಮೀ. ಬಟರ್‌ಫ್ಲೈ: ಆಶ್ಫಿಕ್‌ (ಅಂಜುಮನ್‌ ಕಾಲೇಜು; 40.78ಸೆ,)–1, ವರುಣ (ಆಕ್ಸ್‌ಫರ್ಡ್‌ ಕಾಲೇಜು)–2, ಸಾಕೀಬ್‌ (ಎಐಎಂಸಿಎ ಕಾಲೇಜು, ಭಟ್ಕಳ)–3.

100ಮೀ. ಬ್ರೆಸ್ಟ್‌ ಸ್ಟ್ರೋಕ್‌: ಚಿನ್ಮಯ (ಕೆಎಲ್‌ಇ ಸಿಬಿಎ; 1ನಿ.59.00ಸೆ)–1, ದೇವರಾಜ (ಎ.ವಿ. ಬಾಳಿಗಾ ಕಾಲೇಜು, ಕುಮಟಾ)–2, ಉಸ್ಮಾನ್‌ (ಜೆಎಂಜೆ ಕಾಲೇಜು, ಶಿರಸಿ)–3.

100 ಮೀ. ಬಟರ್‌ಫ್ಲೈ: ಆಶ್ಫಿಕ್‌ (ಅಂಜುಮನ್‌ ಕಾಲೇಜು; 1ನಿ.48.48ಸೆ.)–1, ಶಾಕಿಬ್‌ (ಎಐಎಂಸಿಎ, ಭಟ್ಕಳ)–2, ಅಫ್ನಾನ್‌ (ಅಂಜುಮನ್‌ ಕಾಲೇಜು)–3.

400 ಮೀ. ವೈಯಕ್ತಿಕ ಮೆಡ್ಲೆ: ಜೀಶನ್‌ (ಅಂಜುಮನ್ ಕಾಲೇಜು; 11ನಿ:40.4ಸೆ.)–1, ವಿನೀತ್ (ಬಾಳಿಗಾ ವಾಣಿಜ್ಯ ಕಾಲೇಜು, ಕುಮಟಾ)–2, ಉಸ್ಮಾನ್‌ (ಜೆಎಂಜೆ, ಶಿರಸಿ)–3.

1500ಮೀ. ಫ್ರೀಸ್ಟೈಲ್‌: ಗೌತಮ ಭಜಂತ್ರಿ (ಮಹಾಂತ ಕಾಲೇಜು, ಧಾರವಾಡ; 33ನಿ.04.00ಸೆ.)–1, ಸಚಿನ ರಾಮ್ಜಿ (ಮೃತ್ಯುಂಜಯ ಕಾಲೇಜು, ಧಾರವಾಡ)–2, ವಿನೀತ (ಬಾಳಿಗ ಕಾಲೇಜು, ಕುಮಟಾ)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT