ಅಮರಗೋಳ: ವಿನಯ ಬಿರುಸಿನ ಪ್ರಚಾರ

ಸೋಮವಾರ, ಏಪ್ರಿಲ್ 22, 2019
33 °C

ಅಮರಗೋಳ: ವಿನಯ ಬಿರುಸಿನ ಪ್ರಚಾರ

Published:
Updated:
Prajavani

ಹುಬ್ಬಳ್ಳಿ: ‘ಅಮರಗೋಳ ಕೃಷಿ ಉತ್ಪನ್ನ ಮಾರುಕಟ್ಟೆ ಸುಧಾರಣೆ ಸೇರಿದಂತೆ ರೈತರ ಏಳಿಗೆಗೆ ಬದ್ಧನಾಗಿದ್ದೆನೆ’ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಹೇಳಿದರು.

ಎಪಿಎಂಸಿಯಲ್ಲಿ ಶುಕ್ರವಾರ ಮತಯಾಚನೆ ಸಂದರ್ಭದಲ್ಲಿ ಅವರು ಮಾತನಾಡಿದರು.

ಕೇಂದ್ರ ಬಿಜೆಪಿ ಸರ್ಕಾರ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು, ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ. ರೈತರ ಸಾಲ ಮನ್ನಾ ಅನ್ನೋದು ಶೋಕಿ ಎಂದು ಹೇಳುತ್ತಾ ಮೋದಿ ವಿದೇಶಗಳನ್ನು ತಿರುಗಾಡುತ್ತಿದ್ದು, ಕೇವಲ ದೊಡ್ಡ ದೊಡ್ಡ ಉದ್ಯಮಿಗಳ ಸಾಲಮನ್ನಾಕ್ಕೆ ಮುಂದಾಗಿರುವುದು ದುರ್ದೈವವೇ ಸರಿ ಎಂದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಎಚ್.ಕೋನರೆಡ್ಡಿ, ಎಪಿಎಂಸಿ ಅಧ್ಯಕ್ಷ ಜಗನ್ನಾಥಗೌಡ, ಅನಿಲಕುಮಾರ ಪಾಟೀಲ, ರಾಜಣ್ಣ ಕೊರವಿ, ಸುರೇಶ ದಾಸನೂರ, ಈಶ್ವರ ಕಿತ್ತೂರ, ರಘುನಾಥ ಕೆಂಪಲಿಂಗನಗೌಡ್ರ, ಮಂಜುನಾಥ ಮುದರೆಡ್ಡಿ, ಸಲಿಂ ಬ್ಯಾಹಟ್ಟಿ ಹೆಬ್ಬಳ್ಳಿ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !