ಸಂಚಾರ ಪೊಲೀಸರಿಗೆ ಅಭಿನಂದನೆಯ ‘ಪ್ರಶಸ್ತಿ’

7

ಸಂಚಾರ ಪೊಲೀಸರಿಗೆ ಅಭಿನಂದನೆಯ ‘ಪ್ರಶಸ್ತಿ’

Published:
Updated:
Prajavani

ಹುಬ್ಬಳ್ಳಿ: ನಗರದ ಸಂಚಾರ ದಟ್ಟಣೆ ನಿಭಾಯಿಸುತ್ತಿರುವ ಸಂಚಾರ ಪೊಲೀಸರಿಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಮಂಗಳವಾರ ಸಿ.ಎಂ.ಸಿ.ಎ ಕ್ಲಬ್‌ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹೂ ಗುಚ್ಛ ನೀಡಿ ಅಭಿನಂದಿಸಿದರು.

ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ 30ನೇ ವರ್ಷದ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಸಂಚಾರ ಪೊಲೀಸರಿಗೆ ಅಭಿನಂದನಾ ಪತ್ರ ನೀಡಿ ಸಿಹಿ ಹಂಚಿ ಸಂಭ್ರಮಿಸಿದರು.

ಕಾರ್ಯಕ್ರಮದ ಮುಖ್ಯಸ್ಥೆ ಗೀತಾ ಸಾಲಿಮಠ ಮಾತನಾಡಿ, ‘ಹುಬ್ಬಳ್ಳಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವ ಕಾರಣ ಸಂಚಾರ ಪೊಲೀಸರು ಸಾಕಷ್ಟು ಶ್ರಮ ಪಡುತ್ತಾರೆ. ಇದೊಂದು ಸಾಹಸದ ಕೆಲಸ. ಅವರ ಉತ್ತಮ ಕಾರ್ಯದರಿಂದ ಸಾಕಷ್ಟು ಬಾರಿ ಅಪಘಾತಗಳು ತಪ್ಪಿವೆ. ಸಿಎಂಸಿಎ ಕ್ಲಬ್‌ ವತಿಯಿಂದ 12 ವರ್ಷಗಳಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದೇವೆ’ ಎಂದರು.

ಬಾಸೆಲ್‌ ಮಿಷನ್‌ ಶಾಲೆ, ದುರ್ಗಾದೇವಿ ಶಾಲೆ, ರೈಲ್ವೆ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆ, ಲ್ಯಾಮಿಂಗ್ಟನ್‌ ಶಾಲೆ, ಜ್ಞಾನಭಾರತಿ, ರಾಜೀವ ಗಾಂಧಿ ಹೈಸ್ಕೂಲ್‌, ನವಜೀವನ ಹೈಸ್ಕೂಲ್‌, ಮಹಿಳಾ ವಿದ್ಯಾಪೀಠ, ಸೆಕ್ರೆಡ್‌ ಹಾರ್ಟ್‌ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ರೌಂಡ್‌ ಟೇಬಲ್‌ ಇಂಡಿಯಾ ಹಾಗೂ ವಿವಿಧ ಶಾಲೆಗಳಿಂದ ಬಂದಿದ್ದ ಸುನೀಲ ಹಬೀಬ್‌, ಸವಿತಾ ಕುಲಕರ್ಣಿ, ಪ್ರೀತಿ ಶೆಣೈ, ಪ್ರವೀಣ ನಾಯ್ಕ, ಲಕ್ಷ್ಮಿ ಮದ್ರಾಸ್‌, ಸುಪ್ರಿಯಾ, ಗುಂಜನ್‌, ಗೀತಾ ಎಸ್, ಎಂ.ಎಸ್. ನಿಡವಣಿ, ಎನ್.ಎಸ್. ನರಗುಂದ, ಪಿ.ಎಚ್. ಕಲಗುಡಿ, ಎಂ.ಬಿ. ಶಿವಶಿಂಪಿಗೇರ, ಆರ್.ಸಿ. ಸಂಗೊಳ್ಳಿ, ಎಂ.ಬಿ. ಶಲವಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !