ಶುಕ್ರವಾರ, ಜುಲೈ 1, 2022
27 °C

ಗಟಾರ ನಿರ್ಮಾಣಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಇಲ್ಲಿನ ವಾರ್ಡ್‌ ಸಂಖ್ಯೆ 82ರ ಬಿಡ್ನಾಳ ಮುಖ್ಯರಸ್ತೆಯ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಪ್ರಸಾದ ಅಬ್ಬಯ್ಯ ಶನಿವಾರ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ‘ಹುಬ್ಬಳ್ಳಿ ಶಹರದಲ್ಲಿ ಗ್ರಾಮೀಣ ಸೊಗಡಿನಿಂದ ಕಂಗೊಳಿಸುವ ಬಿಡ್ನಾಳದಲ್ಲಿ ಸಿಸಿ ರಸ್ತೆ, ಗಟಾರ, ಯುಜಿಡಿ, ಬೀದಿದೀಪ ಅಳವಡಿಕೆ, ಸರ್ಕಾರಿ ಶಾಲೆಗಳ ಅಭಿವೃದ್ಧಿ, ದೇವಸ್ಥಾನಗಳ ಜೀರ್ಣೋದ್ಧಾರ ಸೇರಿದಂತೆ ಅನೇಕ ಕಾಮಗಾರಿ ಕೈಗೊಳ್ಳಲಾಗಿದೆ. ಇಲ್ಲಿನ ಮುಖ್ಯರಸ್ತೆಯ ಎರಡೂ ಬದಿಯ ಗಟಾರ ನಿರ್ಮಾಣಕ್ಕೆ ₹ 84 ಲಕ್ಷ ಅನುದಾನ ದೊರಕಿದೆ’ ಎಂದರು.

ಮೋಹನ ಅಸುಂಡಿ, ವಿಜುನಗೌಡ ಪಾಟೀಲ, ವೀರಭದ್ರಪ್ಪ ಮೇಟಿ, ಮೋಹನ ನಂದಿಹಳ್ಳಿ, ಈಶ್ವರಪ್ಪ ಅಂಚಟಗೇರಿ, ಚಂಬಣ್ಣ ಅಸುಂಡಿ, ಗಂಗಾಧರ ಕಲ್ಲಣ್ಣವರ, ಚನ್ನಪ್ಪ ಮುಗದ, ವೀರಭದ್ರಪ್ಪ ಅಸುಂಡಿ, ಮಲ್ಲಿಕಾರ್ಜುನ ಅಂಚಟಗೇರಿ, ಬಸವರಾಜ ಮೊಗದ, ಶಂಕ್ರಪ್ಪ ಅಸುಂಡಿ, ರುದ್ರಪ್ಪ ಕೂಡಲಗಿ, ಅಜರ್ ಮನಿಯಾರ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು