ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲೇಮ್ ತಿರಸ್ಕರಿಸಿದ ಎಲ್‌ಐಸಿಗೆ ₹1.31ಲಕ್ಷ ದಂಡ

Last Updated 12 ಅಕ್ಟೋಬರ್ 2022, 4:40 IST
ಅಕ್ಷರ ಗಾತ್ರ

ಧಾರವಾಡ: ವೈದ್ಯಕೀಯ ಕ್ಲೇಮ್ ತಿರಸ್ಕರಿಸಿದ ಭಾರತೀಯ ಜೀವ ವಿಮಾ ನಿಗಮಕ್ಕೆ ದಂಡ ಸಹಿತ ₹1.31ಲಕ್ಷವನ್ನು ಅರ್ಜಿದಾರರಿಗೆ ನೀಡುವಂತೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

ಇಲ್ಲಿನ ಎಂ.ಬಿ.ನಗರದ ನಿವಾಸಿ ಪ್ರಮಥನಾಥ ಮತ್ತು ಶ್ರೀದೇವಿ ಪಾವಟೆ ದಂಪತಿ 2008ರ ಅ. 30ರಂದು 10 ವರ್ಷದ ಅವಧಿಗೆ ಎಲ್‌ಐಸಿ ಆರೋಗ್ಯ ವಿಮೆ ಖರೀದಿಸಿದ್ದರು. ಶ್ರೀದೇವಿ ಅವರು ಈ ಅವಧಿಯಲ್ಲಿ ಕಿಬ್ಬೊಟ್ಟೆಯ ಸಮಸ್ಯೆಗೆ ನಗರದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಇದಕ್ಕಾಗಿ ₹29,216 ಭರಿಸಿದ್ದರು. ಈ ವೈದ್ಯಕೀಯ ವೆಚ್ಚ ಭರಿಸಲು ತನಗೆ ಪಾವತಿಸುವಂತೆ ಎಲ್ಐಸಿಗೆ ಕ್ಲೇಮ್ ಅರ್ಜಿ ಸಲ್ಲಿಸಿದ್ದರು.

ಆದರೆ ಇದಕ್ಕೆ ಸೂಕ್ತ ಕಾರಣವಿಲ್ಲದೆ ಎಲ್‌ಐಸಿ ತಿರಸ್ಕರಿಸಿದೆ. ಸೇವಾ ನ್ಯೂನತೆ ಎಸಗಿದೆ ಎಂದು ಅರ್ಜಿದಾರರು ಗ್ರಾಹಕರ ಆಯೋಗದಲ್ಲಿ ದೂರು ಸಲ್ಲಿಸಿದ್ದರು.

ದೂರು ಕುರಿತು ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಈಶಪ್ಪ ಕೆ. ಭೂತೆ ಹಾಗೂ ಸದಸ್ಯರಾದ ವಿ.ಎ.ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಅವರು, ‘ಎಲ್‌ಐಸಿಯು ಅರ್ಜಿದಾರರು ಪಾಲಿಸಿ ಹೊಂದಿದ್ದರೂ ಅವರಿಗೆ ಸರಿಯಾಗಿ ಸ್ಪಂದಿಸದೇ ಸೇವಾ ನ್ಯೂನತೆ ಎಸಗಿದೆ ಎಂದು ಅಭಿಪ್ರಾಯಪಟ್ಟರು. ಹೀಗಾಗಿ ದೂರುದಾರ ವೈದ್ಯಕೀಯ ವೆಚ್ಚ ಸಹಿತ ಅವರು ಕ್ಲೇಮ್ ತಿರಸ್ಕರಿಸಿದ ದಿನಾಂಕದಿಂದ ಹಣ ಸಂದಾಯ ಮಾಡುವವರೆಗೆ ಶೇ 8ರ ಬಡ್ಡಿ ಸಹಿತ ಹಣ ನೀಡಬೇಕು. ದೂರುದಾರರಿಗೆ ಆಗಿರುವ ಮಾನಸಿಕ ಹಿಂಸೆ ಮತ್ತು ಅನಾನುಕೂಲತೆಗೆ ₹50ಸಾವಿರ ಪರಿಹಾರ ಜತೆ ಪ್ರಕರಣದ ಖರ್ಚು ₹10ಸಾವಿರ ಸೇರಿಸಿ ನೀಡಬೇಕು’ ಎಂದು ಆದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT