ಅಳ್ನಾವರ: ‘ಗ್ರಾಮೀಣ ಭಾಗದಲ್ಲಿ ಶಾಲೆ ಬಿಟ್ಟ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಾಮಾಜಿಕ ಚಿಂತಕರ ಸಹಕಾರ ಅಗತ್ಯ’ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಿ.ಎಸ್.ಹೆಗಡೆ ಹೇಳಿದರು.

ಶೋಧ ಟೊಯೋಟಾ ಕಂಪನಿ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕುಟುಂಬದ ಆರ್ಥಿಕ ಮುಗ್ಗಟ್ಟು ಮತ್ತು ಕಲಿಕೆಗೆ ಪೂರಕ ವಾತಾವರಣ ಇಲ್ಲದಿರುವ ಸಂದರ್ಭಗಳು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿವೆ. ಖಾಸಗಿ ಸಂಸ್ಥೆಗಳು, ಸಂಘ ಸಂಸ್ಥೆಗಳು, ಧಾನಿಗಳು ಸರ್ಕಾರದ ಜೊತೆ ಕೈ ಜೋಡಿಸುವುದರಿಂದ ಇಂತಹ ಸಮಸ್ಯೆಗಳನ್ನು ಪರಿಹರಿಸಬಹುದು. ಕಲಿಕಾ ಮನೋಭಾವನೆ ಹೆಚ್ಚಿಸಬಹುದು‘ ಎಂದರು.

ಶೋಧ ಟೊಯೋಟಾ ಕಂಪನಿಯ ಅಧಿಕಾರಿಗಳಾದ ಪ್ರೀಯಾಂಕಾ ಮತ್ತು ಅಕ್ಷತಾ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯಲ್ಲಿ ಸದಾ ಕ್ರೀಯಾಶೀಲರಾಗಿರಬೇಕು ಎಂದರು.

ಟೊಯೋಟಾ ಕಂಪನಿಯ ನಿರ್ದೇಶಕಿ ಕಲ್ಪನಾ ನಾಯಕ ಅವರ ಪರವಾಗಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಸಮಾಜ ಸೇವಕ ಪ್ರವೀಣ ಪವಾರ, ಉಪನ್ಯಾಸಕ ರಮೇಶ, ಮುಖ್ಯ ಶಿಕ್ಷಕ ಸಂಜಯ ಮಾಳಿ, ಡಿ.ತಿಪ್ಪೆಸ್ವಾಮಿ, ವಿಜಯಮಾಲಾ ಕೊರವ, ವಲ್ಲಭ ನಾಗವೇಕರ, ರಜತ ಯಡಿಯಾಪೂರ, ಬಸವರಾಜ ದಳವಾಯಿ, ಮಂಜುನಾಥ ರಾಯಗನ್ನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.