ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿರಂಗಭೂಮಿ ಉಳಿವಿಗೆ ಕಾರ್ಪೊರೇಟ್‌ ಸ್ಪರ್ಶ

ನಟ, ನಿರ್ದೇಶಕ ಯಶವಂತ ಸರದೇಶಪಾಂಡೆ ಅಭಿಮತ
Last Updated 27 ಮಾರ್ಚ್ 2020, 10:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವೃತ್ತಿರಂಗಭೂಮಿ ಉಳಿಸಿಕೊಳ್ಳುವ ಉದ್ದೇಶದಿಂದ ನಾಟಕಗಳಿಗೆ ಕಾರ್ಪೊರೇಟ್ ಪ್ರಾಯೋಜಕತ್ವ ಪಡೆಯುವ ಬಗ್ಗೆ ಗಂಭೀರ ಚಿಂತನೆ ನಡೆದಿದೆಎಂದು ರಂಗಕರ್ಮಿ, ನಟ, ನಿರ್ದೇಶಕ ಯಶವಂತ ಸರದೇಶಪಾಂಡೆ ಹೇಳಿದರು.

’ವಿಶ್ವ ರಂಗಭೂಮಿ ದಿನ‘ (ಮಾರ್ಚ್‌ 27) ಅಂಗವಾಗಿ’ಪ್ರಜಾವಾಣಿ‘ ಯೊಂದಿಗೆ ತಮ್ಮ ಕನಸುಗಳನ್ನು ಹಂಚಿಕೊಂಡರು. ವೃತ್ತಿ ರಂಗಭೂಮಿಯನ್ನು ಬೆಳೆಸುವ ನಿಟ್ಟಿನಲ್ಲಿ ಇಂಥದ್ದೊಂದು ಯೋಜನೆ ಜಾರಿಗೆ ತರಲು ವೃತ್ತಿ ರಂಗಭೂಮಿ ಕಲಾವಿದರು, ನಿರ್ದೇಶಕರೊಂದಿಗೆ ಚರ್ಚಿಸಲಾಗಿದೆ ಎಂದರು.

'ನಾವು ಸಂಘಟಿತರಲ್ಲ. ನಾಟಕ ಕಂಪನಿಗಳು ದೊಡ್ಡ ಸಂಸ್ಥೆಯಾಗಿ ಬೆಳೆಯಲಿಲ್ಲ. ವಾಣಿಜ್ಯಾತ್ಮಕವಾಗಿ ಬಲಿಷ್ಠರಾಗದೇ ನಾಟಕ ಕಂಪನಿಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ನಾಟಕ ಪ್ರದರ್ಶನದಿಂದ ಸರಾಸರಿ ₹60 ಸಾವಿರ ಸಂಗ್ರಹವಾಗುತ್ತದೆ. ಆದರೆ ನಮ್ಮೆಲ್ಲ ಖರ್ಚು ಕಳೆದು ಏನೂ ಉಳಿಯುವುದಿಲ್ಲ. ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ₹30 ಸಾವಿರ ಅನುದಾನ ನೀಡುವುದಾಗಿ ಹೇಳಿದೆ. ಆದರೆ ಅದನ್ನು ಪಡೆದುಕೊಳ್ಳಲು ಹತ್ತಾರು ನಿಯಮ, ಹರಸಾಹಸ ಪಡಬೇಕು. ಕಾರ್ಪೊರೇಟ್‌ ನೆರವು ಪಡೆಯುವುದೇ ಅನುಕೂಲ’ ಎಂದು ಅವರು ಅಭಿಪ್ರಾಯಪಟ್ಟರು.

'ಪುಣೆ, ಮುಂಬೈ, ಗುಜರಾತ್‌ಗಳಲ್ಲಿ ಆಯಾ ಭಾಷೆಯ ನಾಟಕಗಳಿಗೆ ಇಂತಹ ಪ್ರಾಯೋಜಕತ್ವ ಸಿಗುತ್ತಿದೆ. ಕನ್ನಡದಲ್ಲಿ ಇನ್ನೂ ಸಾಧ್ಯವಾಗಿಲ್ಲ. ಸಂಗೀತ, ನೃತ್ಯ ಕಾರ್ಯಕ್ರಮಗಳಿಗೆ ಪ್ರಾಯೋಜಕರು ಸಿಗುತ್ತಾರೆ. ಆದರೆ, ಎಲ್ಲ ಕಲೆಗಳ ತಾಯಿಎಂದು ಕರೆಯಲಾಗುವ ನಾಟಕ ಕಲೆಗೆ ಪ್ರಾಯೋಜಕರು ಸಿಗುತ್ತಿಲ್ಲ. ನಾವಿನ್ನೂ ನಷ್ಟದಲ್ಲಿಯೇ ಇದ್ದೇವೆ'ಎನ್ನುತ್ತಾರೆ ಅವರು.

ರಾಜ್ಯದಲ್ಲಿ ಸುಮಾರು 30–40 ವೃತ್ತಿ ರಂಗಭೂಮಿ ಕಂಪನಿ ನಾಟಕ ತಂಡಗಳಿವೆ. 14-15 ನಾಟಕ ಕಂಪನಿ ನಿಯಮಿತವಾಗಿ ಪ್ರದರ್ಶನ ನೀಡುತ್ತಿದೆ. ಒಂದು‌ ಕಾಲದಲ್ಲ ಹುಬ್ಬಳ್ಳಿಯಲ್ಲಿ ಮೂರು ನಾಟಕ ಕಂಪನಿಗಳು ಪ್ರತಿ ದಿನ ಕನಿಷ್ಠ 2–3 ನಾಟಕ ಪ್ರದರ್ಶನ ನಡೆಸುತ್ತಿದ್ದವು. ಆದರೆ ಈಗ ಎಲ್ಲಿಯೂ ಇಂತಹ ದೃಶ್ಯ ಕಾಣುತ್ತಿಲ್ಲ. ಆರ್ಥಿಕ ಭದ್ರತೆ ಇಲ್ಲದೇ ಮುಂದುವರಿ
ಯುವುದು ಕಷ್ಟ. ಈ ನಿಟ್ಟಿನಲ್ಲಿ ಹಲವು ಕಾರ್ಪೊರೇಟ್ ಕಂಪನಿಗಳೊಂದಿಗೆ ಮಾತುಕತೆಯೂ ನಡೆದಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT