ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಟೈನ್ಮೆಂಟ್ ವಲಯ: ಪರಿಷ್ಕೃತ ಮಾರ್ಗಸೂಚಿ

Last Updated 20 ಜನವರಿ 2022, 16:51 IST
ಅಕ್ಷರ ಗಾತ್ರ

ಧಾರವಾಡ: ಕೋವಿಡ್‌–19 ರೂಪಾಂತರಿ ಓಮೈಕ್ರಾನ್‌ನಿಂದ ಉಂಟಾಗಿರುವ 3ನೇ ಅಲೆಯು ವೇಗವಾಗಿ ಹರಡುತ್ತಿದ್ದು, ಕಂಟೈನ್ಮೆಂಟ್ ವಲಯಗಳ ಅಧಿಸೂಚನೆ ಕುರಿತು ಪರಿಷ್ಕೃತ ಮಾರ್ಗಸೂಚಿಯನ್ನು ಜಿಲ್ಲಾಡಳಿತ ಪ್ರಕಟಿಸಿದೆ.

ಐದು ಅಥವಾ ಅದಕ್ಕಿಂಥ ಹೆಚ್ಚು ಪ್ರಕರಣಗಳು ವರದಿಯಾದಲ್ಲಿ ಆ ಪ್ರದೇಶವನ್ನು ಕ್ಲಸ್ಟರ್ ಎಂದು ಪರಿಗಣಿಸಲಾಗುವುದು.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಮನೆಗಳಲ್ಲಿ ಪ್ರಕರಣಗಳು ವರದಿಯಾದರೆ, ಆ ಸಾಲಿನಲ್ಲಿರುವ ಎಲ್ಲ ಮನೆಗಳು ಅಥವಾ 50 ಮೀಟರ್ ವ್ಯಾಪ್ತಿಯ ಮನೆಗಳು, ವಸತಿ ಸಮುಚ್ಚಯಗಳಲ್ಲಿ ಪ್ರಕರಣಗಳು ವರದಿಯಾದರೆ ಆಯಾ ಮಹಡಿಗಳು ಅಥವಾ ಕಾರ್ಯಾಚರಣೆ ಸಾಧ್ಯವಾಗುವಂತೆ ಸ್ಥಳೀಯ ಆರೋಗ್ಯ ಪ್ರಾಧಿಕಾರದ ನಿರ್ಧಾರದಂತೆ ಅಂಥ ಪ್ರದೇಶಗಳನ್ನು ಮೈಕ್ರೋ ಕಂಟೈನ್ಮೆಂಟ್ ವಲಯವೆಂದು ಘೋಷಿಸಲಾಗುತ್ತದೆ.

ಮೈಕ್ರೊ ಕಂಟೈನ್ಮೆಂಟ್, ಕಂಟೈನ್ಮೆಂಟ್ ವಲಯಗಳಲ್ಲಿ ಖಚಿತ ಕೋವಿಡ್-19 ಪ್ರಕರಣವು ವರದಿಯಾದ 7 ದಿನಗಳ ನಂತರ ಯಾವುದೇ ಖಚಿತ ಪ್ರಕರಣಗಳು ವರದಿಯಾಗದಿದ್ದರೆ ಅವುಗಳನ್ನು ಮುಕ್ತಗೊಳಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT