ಬಸ್ ಟಿಕೆಟ್‌ನಲ್ಲಿ ಕೋವಿಡ್ ಲಸಿಕೆ ಜಾಗೃತಿ ಸಂದೇಶ

ಹುಬ್ಬಳ್ಳಿ: ಸಾರ್ವಜನಿಕರಿಗೆ ಕೋವಿಡ್ ಲಸಿಕೆಯ ಮಹತ್ವ ಹಾಗೂ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಟಿಕೆಟ್‌ನಲ್ಲಿ ವಿವಿಧ ಸಂದೇಶಗಳನ್ನು ಮುದ್ರಿಸಿದೆ.
ಕೊರೊನಾ ಅಪಾಯ ತಡೆಯಲು ತಪ್ಪದೆ ಲಸಿಕೆ ಪಡೆಯಿರಿ, ಬಸ್ ಹಾಗೂ ನಿಲ್ದಾಣದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ, ಕೊರೊನಾದಿಂದ ರಕ್ಷಿಸಿಕೊಳ್ಳಲು ತಪ್ಪದೆ ಮಾಸ್ಕ್ ಧರಿಸಿರಿ ಮುಂತಾದ ಸಂದೇಶಗಳನ್ನು ಟಿಕೆಟ್ ಕೆಳ ಭಾಗದಲ್ಲಿ ಮುದ್ರಿಸಲಾಗಿದೆ. ಅಲ್ಲಿಯೇ ಸಹಾಯವಾಣಿ ಸಂಖ್ಯೆಯನ್ನೂ ಸಹ ನಮೂದಿಸಲಾಗಿದೆ.
‘ನಿತ್ಯ ಬಸ್‌ಗಳಲ್ಲಿ 40 ರಿಂದ 50 ಸಾವಿರ ಜನರು ಪ್ರಯಾಣಿಸುತ್ತಾರೆ. ಅವರಿಗೆ ಲಸಿಕೆ ಹಾಗೂ ಕೊರೊನಾ ತಡೆಯುವ ಬಗೆಗೆ ಜಾಗೃತಿ ಮೂಡಿಸಲು ಟಿಕೆಟ್‌ಗಳ ಕೆಳಭಾಗದಲ್ಲಿ ಸಂದೇಶ ಮುದ್ರಿಸಲಾಗಿದೆ’ ಎಂದು ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದರು.
ಬಸ್ ಟಿಕೆಟ್ ದರ ಹೆಚ್ಚಳವಿಲ್ಲ, ನೌಕರರ ವೇತನ ಏರಿಸುವುದು ಕಷ್ಟ: ಲಕ್ಷ್ಮಣ ಸವದಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.