ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲೂ ಇಲ್ಲ, ಟಿವಿಯೂ ಇಲ್ಲ; ಬಡ ವಿದ್ಯಾರ್ಥಿಗಳ ಓದಿಗೆ ಹಲವಾರು ಸಂಕಷ್ಟ

ಕೋವಿಡ್: ಬಡ ವಿದ್ಯಾರ್ಥಿಗಳ ಓದಿಗೆ ಹಲವಾರು ಸಂಕಷ್ಟ
Last Updated 26 ಆಗಸ್ಟ್ 2021, 4:04 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೋವಿಡ್‌ನಿಂದಾಗಿ ಶಾಲೆಗಳು ಮಕ್ಕಳ ಭೌತಿಕ ಹಾಜರಾತಿಗೆ ಪರ್ಯಾಯವಾಗಿ ಆನ್‌ಲೈನ್‌ನಲ್ಲಿ ತರಗತಿಗಳು ನಡೆಯುತ್ತಿವೆ. ಆದರೆ, ಧಾರವಾಡ ಜಿಲ್ಲೆಯಲ್ಲಿ 23,724 ವಿದ್ಯಾರ್ಥಿಗಳು ಮನೆಯಲ್ಲಿ ಮೊಬೈಲ್‌, ಟಿವಿ ಹೊಂದಿಲ್ಲ. ಅವರ ಶೈಕ್ಷಣಿಕ ಪ್ರಗತಿ ಕುಂಠಿತವಾಗಿದೆ.

ಶಿಕ್ಷಣ ಇಲಾಖೆ ನಡೆಸಿದ ಪರ್ಯಾಯ ಶಿಕ್ಷಣಕ್ಕೆ ಹೊಂದಿರುವ ಸೌಲಭ್ಯಗಳ ಸರ್ವೆಯಲ್ಲಿ 60 ಸಾವಿರಕ್ಕೂ ಹೆಚ್ಚು ಮಕ್ಕಳ ಮನೆಯಲ್ಲಿ ಕೀಪ್ಯಾಡ್‌ ಮೊಬೈಲ್‌ ಮಾತ್ರ ಹೊಂದಿರುವುದು ಗೊತ್ತಾಗಿದೆ. ಹಾಗಾಗಿ, ಆನ್‌ಲೈನ್‌ನಲ್ಲಿ ಪಾಠ ಕೇಳಲಾಗುತ್ತಿಲ್ಲ. ಹಲವಾರು ಮನೆಗಳಲ್ಲಿ ಪೋಷಕರು ಸ್ಮಾರ್ಟ್‌ ಫೋನ್‌ ಹೊಂದಿದ್ದರೂ, ಮಕ್ಕಳ ತರಗತಿಗೆ ಫೋನ್‌ ಕೊಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಸರ್ಕಾರಿ ಶಾಲೆಗಳ ಮಕ್ಕಳ ಮನೆಗಳಲ್ಲಷ್ಟೇ ಟಿವಿ, ಮೊಬೈಲ್‌ ಹೊಂದಿಲ್ಲ ಎನ್ನುವಂತಿಲ್ಲ. ಅನುದಾನಿತ, ಅನುದಾನ ರಹಿತ ಶಾಲೆಗಳ ಮಕ್ಕಳೂ ಈ ಸೌಲಭ್ಯ ಹೊಂದಿಲ್ಲ ಎನ್ನುವುದು ಸರ್ವೆಯಲ್ಲಿ ತಿಳಿದು ಬಂದಿದೆ.

ಕೋವಿಡ್‌–19 ಒಂದನೇ ಅಲೆ ಆರಂಭವಾದಾಗಿನಿಂದ ಶಾಲೆಗಳು ಹೆಚ್ಚೂ– ಕಡಿಮೆ ಬಂದ್‌ ಆಗಿವೆ. ವಿದ್ಯಾರ್ಥಿಗಳು ಭೌತಿಕವಾಗಿ ತರಗತಿಗೆ ಹಾಜರಾಗುತ್ತಿಲ್ಲವಾದರೂ, ಆನ್‌ಲೈನ್‌ನಲ್ಲಿಯೇ ಪಾಠಗಳು ನಡೆಯುತ್ತಿವೆ. ಸೌಲಭ್ಯಗಳ ಕೊರತೆಯಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪಾಠ ಕೇಳಲು ಆಗುತ್ತಿಲ್ಲ.

ಚಂದನ ವಾಹಿನಿಯಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಅದನ್ನು ಕೇಳಲು ಲಕ್ಷಾಂತರ ವಿದ್ಯಾರ್ಥಿಗಳ ಮನೆಯಲ್ಲಿ ಟಿವಿಯೂ ಇಲ್ಲವಾಗಿದೆ. ಅವರು ಪಾಠ ಕೇಳಲು ಅಕ್ಕ–ಪಕ್ಕದ ಮನೆಗಳವರನ್ನೇ ಆಶ್ರಯಿಸಬೇಕಾಗಿದೆ. ಕೋವಿಡ್‌ನಿಂದಾಗಿ ಕೆಲವರು ವಿದ್ಯಾರ್ಥಿಗಳನ್ನು ಮನೆಗೆ ಸೇರಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಈಗ 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ಆರಂಭಿಸಲಾಗಿದೆ. ಆದರೆ, ಹಾಜರಾತಿ ಕಡ್ಡಾಯಗೊಳಿಸಿಲ್ಲ. ಆನ್‌ಲೈನ್‌ನಲ್ಲಿಯೂ ಶಿಕ್ಷಣ ಮುಂದುವರಿಸಬಹುದು ಎಂದು ಹೇಳಲಾಗಿದೆ. ಎರಡೂ ಕಡೆ ಬೋಧಿಸಬೇಕಾದ ಒತ್ತಡಕ್ಕೆ ಶಿಕ್ಷಕರು ಒಳಗಾಗಿದ್ದಾರೆ. ಶೇ 50ರಷ್ಟು ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸಬೇಕೇ? ಬೇಡವೇ ಎಂಬ ಗೊಂದಲದಲ್ಲಿದ್ದಾರೆ ಪೋಷಕರು.

‘ಆನ್‌ಲೈನ್‌ ಪಾಠಗಳು ನಡೆಯುತ್ತಿವೆ. ಆನ್‌ಲೈನ್‌ ಪಡೆಯಲು ಸಾಧ್ಯವಾಗದ ಮಕ್ಕಳ ಪೋಷಕರ ಮೊಬೈಲ್‌ಗಳಿಗೆ ಪಾಠದ ವಿಡಿಯೊ ಹಾಗೂ ನೋಟ್ಸ್‌ಗಳನ್ನು ಕಳುಹಿಸಲಾಗುತ್ತಿದೆ’ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡ ಜಿಲ್ಲೆ ಉಪನಿರ್ದೇಶಕ ಮೋಹನ ಹಂಚಾಟೆ.

3,17,610
1ರಿಂದ10ನೇ ತರಗತಿಯ ಒಟ್ಟು ವಿದ್ಯಾರ್ಥಿಗಳು

1,44,395
ಟಿವಿ, ಇಂಟರ್‌ನೆಟ್‌ ಸೌಲಭ್ಯ ಹೊಂದಿದ ಮಕ್ಕಳು

86,747
ಮನೆಯಲ್ಲಿ ಟಿವಿ ಹೊಂದಿದವರು

67,735
ಕೀಪ್ಯಾಡ್‌ ಮೊಬೈಲ್‌ ಹೊಂದಿದವರು


ಪರ್ಯಾಯ ಶಿಕ್ಷಣಕ್ಕೆ ಹೊಂದಿದ ಸೌಲಭ್ಯಗಳ ವಿವರ

ಸೌಲಭ್ಯ;ಸರ್ಕಾರಿ;ಅನುದಾನಿತ;ಅನುದಾನ ರಹಿತ
ಟಿವಿ, ಮೊಬೈಲ್‌ ಹೊಂದಿಲ್ಲದವರು;14,630;3,571;5,523
ಕೀಪ್ಯಾಡ್‌ ಮೊಬೈಲ್‌ ಹೊಂದಿದವರು;33,263;9,493;19,979
ಟಿವಿ ಹೊಂದಿದವರು;38,879;14,328;33,541
ಟಿವಿ, ಇಂಟರ್‌ನೆಟ್‌ ಹೊಂದಿರುವವರು;51,,857;20,560;71,976

* ಪೋಷಕರ ಮೂಲಕವೂ ಮಕ್ಕಳೊಂದಿಗೆ ಶಿಕ್ಷಕರು ಸಂಪರ್ಕ ಹೊಂದಿದ್ದಾರೆ. ಲಿಖಿತ ನೋಟ್ಸ್‌ ನೀಡುವ ಮೂಲಕ ಶೈಕ್ಷಣಿಕ ಪ್ರಗತಿಗೆ ನೆರವಾಗುತ್ತಿದ್ದಾರೆ

-ಮೋಹನ ಹಂಚಾಟೆ, ಉಪನಿರ್ದೆಶಕ, ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT