ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಆಂಬುಲೆನ್ಸ್ ಬಾಡಿಗೆಗೆ ಪಡೆಯಲು ನಿರ್ಧಾರ

ಖಾಸಗಿಯವರಿಂದ ಏಳು ತುರ್ತು ವಾಹನ ಪಡೆಯಲು ಮುಂದಾದ ಜಿಲ್ಲಾಡಳಿತ
Last Updated 11 ಜುಲೈ 2020, 14:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜಿಲ್ಲೆಯಾದ್ಯಂತ ದಿನೇ ದಿನೇ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಸೋಂಕಿತರನ್ನು ಕರೆ ತರಲು ಹೆಚ್ಚುವರಿಯಾಗಿ 7 ಖಾಸಗಿ ಆಂಬುಲೆನ್ಸ್‌ಗಳನ್ನು ಬಾಡಿಗೆಗೆ ಪಡೆಯಲು ಜಿಲ್ಲಾಡಳಿತ ನಿರ್ಧರಿಸಿದೆ.

ಗ್ರಾಮಗಳ ಮಟ್ಟದಲ್ಲೂ ಕೊರೊನಾ ಹರಡುತ್ತಿದೆ. ಪ್ರಕರಣಗಳು ಏರುಗತಿಯಲ್ಲೇ ಸಾಗಿದರೆ, ಹುಬ್ಬಳ್ಳಿಯಲ್ಲಿರುವ ಕಿಮ್ಸ್‌ ಕೋವಿಡ್–19 ಆಸ್ಪತ್ರೆಗೆಜಿಲ್ಲೆಯ ವಿವಿಧ ಭಾಗಗಳಿಂದ ಸೋಂಕಿತರನ್ನು ಕರೆ ತರುವುದು ಸವಾಲಾಗಲಿದೆ.ಹಾಗಾಗಿ, ಆಂಬುಲೆನ್ಸ್‌ಗಳ ಕೊರತೆ ಎದುರಾಗದಿರಲೆಂದು, ಮುಂಜಾಗ್ರತಾ ಕ್ರಮವಾಗಿ ಆಂಬುಲೆನ್ಸ್‌ಗಳನ್ನು ಬಾಡಿಗೆಗೆ ಪಡೆಯಲು ತೀರ್ಮಾನಿಸಲಾಗಿದೆ.

ಏಳು ಮೀಸಲು:‘ಸದ್ಯ ಏಳು ಆಂಬುಲೆನ್ಸ್‌ಗಳನ್ನು ಕೋವಿಡ್‌ಗಾಗಿಯೇ ಮೀಸಲಿಡಲಾಗಿದೆ. ಜಿಲ್ಲಾ ಕೇಂದ್ರದಲ್ಲಿರುವ ಈ ವಾಹನಗಳು ಸೋಂಕಿತರು ಎಲ್ಲಿದ್ದರೂ ಆಸ್ಪತ್ರೆಗೆ ಕರೆದುಕೊಂಡು ಬರಲಾಗುತ್ತಿದೆ’ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ಯಶವಂತ ಮದಿನಕರ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಾಲ್ಲೂಕು ಮಟ್ಟದಲ್ಲಿರುವ ಆಂಬುಲೆನ್ಸ್‌ಗಳನ್ನು ಕೋವಿಡ್‌ ಉದ್ದೇಶಕ್ಕೆ ಬಳಸುತ್ತಿಲ್ಲ. ಸೋಂಕು ಹರಡುವಿಕೆ ಹೀಗೆ ಹೆಚ್ಚಾದರೆ, ಮುಂದೆ ತಾಲ್ಲೂಕುಗಳಿಗೂ ಒಂದೊಂದು ಆಂಬುಲೆನ್ಸ್ ಬೇಕಾಗಬಹುದು. ಹಾಗಾಗಿ, ಹೆಚ್ಚುವರಿಯಾಗಿ ಖಾಸಗಿಯವರಿಂದ 7 ಆಂಬುಲೆನ್ಸ್‌ಗಳನ್ನು ಬಾಡಿಗೆಗೆ ಪಡೆದು ಸನ್ನದ್ಧ ಸ್ಥಿತಿಯಲ್ಲಿಡಲಾಗುವುದು’ ಎಂದರು.

ಪಾಳಿಯಲ್ಲಿ ಕೆಲಸ:‘ಕೋವಿಡ್‌ ರೋಗಿಗಳನ್ನು ಕರೆತರುವ ಆಂಬುಲೆನ್ಸ್‌ಗಳಲ್ಲಿ ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಚಾಲಕರು ಕಾರ್ಯ ನಿರ್ವಹಿಸುತ್ತಾರೆ. ಅವರೊಂದಿಗೆ ಇಬ್ಬರು ಆರೋಗ್ಯ ಸಿಬ್ಬಂದಿಯೂ ಇರುತ್ತಾರೆ. ಸೋಂಕಿತರನ್ನು ಕರೆದುಕೊಂಡು ಬಂದ ಬಳಿಕ, ವಾಹನಕ್ಕೆ ಸ್ಯಾನಿಟೈಸ್ ಮಾಡಲಾಗುತ್ತದೆ’ ಎಂದು ಹೇಳಿದರು.

ಅಂಕಿ ಅಂಶ

86 - ಜಿಲ್ಲೆಯಲ್ಲಿರುವ ಒಟ್ಟು ಆಂಬುಲೆನ್ಸ್‌ಗಳು

22 - 108 ತುರ್ತು ವಾಹನಗಳು

20 - ಸರ್ಕಾರಿ ಆಸ್ಪತ್ರೆಗಳ ಆಂಬುಲೆನ್ಸ್‌

44 - ಖಾಸಗಿ ಆಂಬುಲೆನ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT