ಕ್ರಿಕೆಟ್‌: ಜ 10ರಿಂದ ಬಿಡಿಕೆ ಕಪ್‌ ಟೂರ್ನಿ

7

ಕ್ರಿಕೆಟ್‌: ಜ 10ರಿಂದ ಬಿಡಿಕೆ ಕಪ್‌ ಟೂರ್ನಿ

Published:
Updated:

ಹುಬ್ಬಳ್ಳಿ: ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ಜ. 11ರಿಂದ 15ರ ವರೆಗೆ ಜೆ.ಕೆ. ಸ್ಕೂಲ್‌ ಸಮೀಪ ಇರುವ ಬಿಜಿಎ ಕ್ರೀಡಾಂಗಣದಲ್ಲಿ 12 ವರ್ಷದ ಒಳಗಿನವರ ಅಂತರ ಕ್ಲಬ್‌ ಕ್ರಿಕೆಟ್‌ ಟೂರ್ನಿ ಹಮ್ಮಿಕೊಂಡಿದೆ.

16 ತಂಡಗಳು ಪಾಲ್ಗೊಳ್ಳಲಿವೆ. ಒಟ್ಟು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಿದ್ದು, ಪ್ರತಿ ಗುಂಪಿನಲ್ಲಿ ತಲಾ ನಾಲ್ಕು ತಂಡಗಳಿವೆ.

 ‘ಎ’ ಗುಂಪಿನಲ್ಲಿ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌, ಬೆಳಗಾವಿಯ ಎಂಸಿಸಿಸಿ, ಧಾರವಾಡದ ವಿಎಂಸಿಎ, ಬಿಜಾಫುರ ಜಿಲ್ಲಾ ಇಲೆವೆನ್‌, ‘ಬಿ’ ಗುಂಪಿನಲ್ಲಿ ಧಾರವಾಡದ ಫಸ್ಟ್‌ ಕ್ರಿಕೆಟ್‌ ಅಕಾಡೆಮಿ, ಬೆಳಗಾವಿಯ ವಿಜಯ ಕ್ರಿಕೆಟ್‌ ಅಕಾಡೆಮಿ, ಸಿಸಿಐ, ಗೋವಾದ ಪೊಂಡಾ ಕ್ರಿಕೆಟ್‌ ಅಕಾಡೆಮಿ ಪಾಲ್ಗೊಳ್ಳಲಿವೆ.

‘ಸಿ’ ಗುಂಪಿನಲ್ಲಿ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ, ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌, ದಾವಣಗೆರೆಯ ವೀನಸ್‌ ಕ್ರಿಕೆಟ್‌ ಕ್ಲಬ್‌ ಮತ್ತು ಬೆಂಗಳೂರಿನ ಜಸ್ಟ್‌ ಕ್ರಿಕೆಟ್‌ ಅಕಾಡೆಮಿ, ‘ಡಿ’ ಗುಂಪಿನಲ್ಲಿ ಹುಬ್ಬಳ್ಳಿಯ ತೇಜಲ್‌ ಶಿರಗುಪ್ಪಿ ಅಕಾಡೆಮಿ, ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌, ಕೊಲ್ಹಾಪುರದ ಸುಸಂಸ್ಕಾರ ತಂಡ ಮತ್ತು ಶಹಬಾದ್‌ ಕ್ರಿಕೆಟ್‌ ಅಕಾಡೆಮಿ ತಂಡಗಳು ಭಾಗವಹಿಸಲಿವೆ.

ಪ್ರತಿ ಪಂದ್ಯ ತಲಾ 20 ಓವರ್‌ಗಳದ್ದಾಗಿತ್ತದೆ. ನಿತ್ಯ ಮೂರು ಪಂದ್ಯಗಳು ನಡೆಯಲಿದ್ದು, ಪ್ರತಿ ತಂಡ ಗುಂಪಿನ ತಂಡಗಳ ಜೊತೆ ತಲಾ ಮೂರು ಪಂದ್ಯಗಳನ್ನು ಆಡಲಿವೆ. ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿದ ತಂಡ ನೇರವಾಗಿ ಸೆಮಿಫೈನಲ್‌ ಪ್ರವೇಶಿಸಲಿವೆ. 15ರಂದು ಸೆಮಿಫೈನಲ್‌ ಮತ್ತು ಫೈನಲ್‌ ಪಂದ್ಯಗಳು ನಡೆಯುತ್ತವೆ ಎಂದು ಬಿಡಿಕೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !