ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಬೆಟ್ಟಿಂಗ್‌: ₹7.75 ಲಕ್ಷ ವಶ

ಮುಂದುವರಿದ ಪೊಲೀಸರ ಕಾರ್ಯಾಚರಣೆ
Last Updated 12 ಅಕ್ಟೋಬರ್ 2020, 6:14 IST
ಅಕ್ಷರ ಗಾತ್ರ

ಧಾರವಾಡ / ಹುಬ್ಬಳ್ಳಿ: ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ನಡೆಯುತ್ತಿರುವ ಐಪಿಎಲ್‌ ಕ್ರಿಕೆಟ್ ಟೂರ್ನಿಯ ಪಂದ್ಯಗಳ ಬಗ್ಗೆ ಬೆಟ್ಟಿಂಗ್‌ ದಂಧೆಯ ಮೇಲೆ ಕಾರ್ಯಾಚರಣೆ ಮುಂದುವರಿಸಿರುವ ಪೊಲೀಸರು ಅವಳಿ ನಗರಗಳಲ್ಲಿ ಒಟ್ಟು ₹7.75 ಲಕ್ಷ ಹಣ ವಶಪಡಿಸಿಕೊಂಡು, ಆರು ಜನರನ್ನು ಬಂಧಿಸಿದ್ದಾರೆ.

ಧಾರವಾಡದ ಸಪ್ತಾಪುರ ಬಡಾವಣೆಯಲ್ಲಿ ತಾಲ್ಲೂಕಿನ ಸಲಕಿನಕೊಪ್ಪ ಗ್ರಾಮದ ಅವಿನಾಶ ಉರ್ಫ್ ಅವಿ ಅಶೋಕ ಚವ್ಹಾಣ ಮತ್ತು ಕೆಲಗೇರಿ ಆಂಜನೇಯ ನಗರದ ಮಂಜುನಾಥ ಬಸಪ್ಪ ವಾಲೀಕಾರ ಅವರನ್ನುಉಪನಗರ ಠಾಣೆಯ ಪೊಲೀಸರು ಶನಿವಾರ ಬಂಧಿಸಿ₹7.60 ಲಕ್ಷ ನಗದು, ಮೂರು ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ಸಪ್ತಾಪೂರ ಬಡಾವಣೆಯ ಸ್ಪಂದನಾ ಆಸ್ಪತ್ರೆಯ ಬಳಿ ರಸ್ತೆ ಬದಿಯಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದರು. ಎಸಿಪಿ ಜಿ.ಅನುಷಾ ಅವರ ಮಾರ್ಗದರ್ಶನದಲ್ಲಿ ಉಪನಗರ ಠಾಣೆಯ ಸಿಪಿಐ ಪ್ರಮೋದ ಯಲಿಗಾರ ಅವರ ನೇತೃತ್ವದಲ್ಲಿ ಪಿಎಸ್‌ಐ ಶ್ರೀಮಂತ ಹುಣಸಿಕಟ್ಟಿ, ಸಿಬ್ಬಂದಿ ಬಸವರಾಜ ಮಾಗುಂಡನವರ, ಕೆ.ಎಂ.ಡೊಕ್ಕನವರ, ಆರ್.ಎಚ್.ಬಡ್ನಿ, ಯು.ಡಿ.ಬಂಗಾರಿ, ಚೇತನ ಇಂಗಳಗಾವಿ ಮತ್ತು ಆನಂದ ಬಡಿಗೇರ ದಾಳಿ ನಡೆಸಿದೆ.

ಹುಬ್ಬಳ್ಳಿ–ಗದಗ ರಸ್ತೆಯಲ್ಲಿ ರೈಲ್ವೆ ವರ್ಕ್‌ ಶಾಪ್‌ ಮುಂದೆ ಕೋಲ್ಕತ್ತ ನೈಟ್‌ ರೈಡರ್ಸ್‌ ಮತ್ತು ಕಿಂಗ್ಸ್ ಇಲೆವೆನ್‌ ಪಂಜಾಬ್ ತಂಡಗಳ ನಡುವಿನ ಪಂದ್ಯದ ವೇಳೆ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಲಾಗಿದೆ. ಅವರಿಂದ ₹15,800 ಹಣ ಮತ್ತು ಮೂರು ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅರವಿಂದ ನಗರದ ಕಿಶನ್‌ಜರತಾರಘರ, ಕೇಶ್ವಾಪುರದ ಶಬ್ಬೀರ ಹೊಸಪೇಟೆ, ಸಿದ್ದಾರ್ಥ ಕಾಲೊನಿಯ ಪವನ ಹಿರೇಮನಿ ಮತ್ತು ಆನಂದ ನಗರದ ಸುರೇಶ ಬುರಬುರೆ ಬಂಧಿತರು.

ಅಕ್ರಮ ಮದ್ಯ ಸಾಗಾಟ: ಅಕ್ರಮ ಮದ್ಯ ಸಾಗಾಟ ಮತ್ತು ಮಾರಾಟಕ್ಕೆ ಮುಂದಾದ ಆರೋಪದ ಮೇಲೆ ಸವದತ್ತಿ ತಾಲ್ಲೂಕಿನ ಉಗರಗೋಳ ಗ್ರಾಮದ ಭೀಮಪ್ಪ ಜಾಡರ ಎಂಬಾತನನ್ನು ಘಂಟಿಕೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತನಿಂದ ₹14,460 ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.

ನಗರದ ಕೋಯಿನ್‌ ಮಾಲ್‌ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ನಡೆಸಿದ ಹುಬ್ಬಳ್ಳಿ ಶಹರ ಪೊಲೀಸರು ಹತ್ತು ಜನರನ್ನು ಬಂಧಿಸಿ ₹4,936 ನಗದು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT