ಗುರುವಾರ , ಅಕ್ಟೋಬರ್ 17, 2019
26 °C

ಕ್ರಿಕೆಟ್‌: ಇನಿಂಗ್ಸ್‌ ಮುನ್ನಡೆಯ ಸನಿಹ ಕರ್ನಾಟಕ

Published:
Updated:
Prajavani

ಹುಬ್ಬಳ್ಳಿ: ಚುರುಕಿನ ಬೌಲಿಂಗ್ ಮೂಲಕ ಹೈದರಾಬಾದ್‌ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ ಕರ್ನಾಟಕ, 16 ವರ್ಷದ ಒಳಗಿನವರ ವಿಜಯ್ ಮರ್ಚಂಟ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆಯ ಹೊಸ್ತಿಲಲ್ಲಿದೆ.

ಇಲ್ಲಿನ ಕೆ.ಎಸ್‌.ಸಿ.ಎ. ಮೈದಾನದಲ್ಲಿ ಶನಿವಾರ ಟಾಸ್‌ ಜಯಿಸಿದ ಕರ್ನಾಟಕ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡು ಎದುರಾಳಿ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 105 ರನ್‌ಗೆ ಆಲೌಟ್‌ ಮಾಡಿತು.

ಆರಂಭದಲ್ಲಿ ಮುಗ್ಗರಿಸಿ ನಂತರ ಚೇತರಿಸಿಕೊಂಡ ಕರ್ನಾಟಕ ಎರಡನೇ ದಿನದಾಟದ ಅಂತ್ಯಕ್ಕೆ 34 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ನಷ್ಟಕ್ಕೆ 98 ರನ್ ಕಲೆಹಾಕಿದೆ. ಇನಿಂಗ್ಸ್‌ ಮುನ್ನಡೆಗೆ ಎಂಟು ರನ್‌ ಅಗತ್ಯವಿದೆ. ಗುರುವಾರ ಮಳೆ ಸುರಿದು ಮೈದಾನ ತೇವವಾಗಿದ್ದರಿಂದ ಮೊದಲ ದಿನವಾದ ಶುಕ್ರವಾರದ ಆಟ ನಡೆದಿರಲಿಲ್ಲ. ಇನ್ನು ಒಂದು ದಿನದಾಟ ಬಾಕಿ ಉಳಿದಿದೆ.

ಎಸ್‌. ಚೈತನ್ಯ (ಬ್ಯಾಟಿಂಗ್‌ 64, 86ಎಸೆತ, 11 ಬೌಂಡರಿ, 1 ಸಿಕ್ಸರ್‌) ರಾಜ್ಯ ತಂಡವನ್ನು ಆರಂಭಿಕ ಸಂಕಷ್ಟದಿಂದ ಪಾರು ಮಾಡಿದರು.

ಸಂಕ್ಷಿಪ್ತ ಸ್ಕೋರು: ಹೈದರಾಬಾದ್ ಮೊದಲ ಇನಿಂಗ್ಸ್‌ 65.1 ಓವರ್‌ಗಳಲ್ಲಿ 105 (ಮಯಂಕ್‌ ಗುಪ್ತಾ 16, ಪ್ರಣವ್‌ ವರ್ಮ 16, ಎ. ಯುವರಾಜು 14, ರಿಷಿತ್‌ ರೆಡ್ಡಿ 15; ಆರ್‌. ಧನುಷ್ ಗೌಡ 19ಕ್ಕೆ2, ಆದಿತ್ಯ ನಾಯರ್ 21ಕ್ಕೆ2, ಮೊಯ್ಸಿನ್‌ ಖಾನ್‌ 28ಕ್ಕೆ3). ಕರ್ನಾಟಕ ಪ್ರಥಮ ಇನಿಂಗ್ಸ್‌ 34 ಓವರ್‌ಗಳಲ್ಲಿ 4 ವಿಕೆಟ್‌ಗೆ 98 (ಎಸ್‌. ಚೈತನ್ಯ ಬ್ಯಾಟಿಂಗ್‌ 64, ಯಶೋವರ್ಧನ ಪ್ರತಾಪ್‌ ಬ್ಯಾಟಿಂಗ್‌ 16; ರಿಷಿತ್‌ ರೆಡ್ಡಿ 30ಕ್ಕೆ3).

Post Comments (+)