ಗುರುವಾರ , ಏಪ್ರಿಲ್ 2, 2020
19 °C

ಕ್ರಿಕೆಟ್‌: ಎಸ್‌ಡಿಎಂ ತಂಡಕ್ಕೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಧಾರವಾಡದ ಎಸ್‌ಡಿಎಂ ‘ಸಿ’ ತಂಡ ಕೆಎಸ್‌ಸಿಎ ಧಾರವಾಡ ವಲಯದ ನಾಲ್ಕನೇ ಡಿವಿಷನ್‌ ಕ್ರಿಕೆಟ್‌ ಟೂರ್ನಿಯ ಬುಧವಾರದ ಪಂದ್ಯದಲ್ಲಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ತಂಡದ ಎದುರು 80 ರನ್‌ಗಳ ಸುಲಭ ಗೆಲುವು ಸಾಧಿಸಿತು.

ರಾಜನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಎಸ್‌ಡಿಎಂ ತಂಡ 30 ಓವರ್‌ಗಳಲ್ಲಿ 208 ರನ್‌ ಕಲೆಹಾಕಿತು. ನವನೀತ್ ಮರಾಠೆ (76) ಮತ್ತು ಇಮ್ರಾನ್‌ ಖಾನ್‌ (31) ಅವರ ಉತ್ತಮ ಬ್ಯಾಟಿಂಗ್‌ ಇದಕ್ಕೆ ಕಾರಣವಾಯಿತು. ಎದುರಾಳಿ ಸಿದ್ಧಾರೂಢ ತಂಡ 24.1 ಓವರ್‌ಗಳಲ್ಲಿ 129 ರನ್‌ ಗಳಿಸಿ ತನ್ನ ಹೋರಾಟ ಮುಗಿಸಿತು. ಎಸ್‌ಡಿಎಂ ತಂಡದ ಮೋಹನ ಸತ್ತೂರ ನಾಲ್ಕು ಮತ್ತು ಕೆ. ಸುರೇಂದ್ರ ಎರಡು ವಿಕೆಟ್‌ಗಳನ್ನು ಕಬಳಿಸಿದರು.

ಇದೇ ಮೈದಾನದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ ‘ಈ’ ತಂಡ 25.4 ಓವರ್‌ಗಳಲ್ಲಿ 86 ರನ್ ಕಲೆಹಾಕಿತು. ಸುಲಭವಾದ ಗುರಿಯನ್ನು ಎದುರಾಳಿ ಹುಬ್ಬಳ್ಳಿ ಎಆರ್‌ಎಸ್‌ ಸ್ಟಾರ್‌ ಸ್ಪೋರ್ಟ್ಸ್‌ ಕ್ಲಬ್‌ 13.1 ಓವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು ಮುಟ್ಟಿತು. ಸ್ಪೋರ್ಟ್ಸ್‌ ಕ್ಲಬ್‌ ತಂಡದ ಎಸ್‌. ನದೀಮ್‌ ಮೂರು, ಎಲ್‌. ಅಖಿಲ್‌ ಮತ್ತು ಮೊಹಮ್ಮದ್‌ ಶರೀಫ್‌ ತಲಾ ಎರಡು ವಿಕೆಟ್ ಉರುಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)