ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಲೆಂಟ್‌ ಅಕಾಡೆಮಿಗೆ ಗೆಲುವು

ಕೆಎಸ್‌ಸಿಎ ಎರಡನೇ ಡಿವಿಷನ್‌ ಕ್ರಿಕೆಟ್‌ ಟೂರ್ನಿ
Last Updated 22 ಜನವರಿ 2022, 4:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸಂಘಟಿತ ಬ್ಯಾಟಿಂಗ್‌ನಿಂದಾಗಿ ಸವಾಲಿನ ಮೊತ್ತ ಕಲೆ ಹಾಕಿದ್ದ ನಗರದ ಟಾಲೆಂಟ್‌ ಅಕಾಡೆಮಿ, ಕೆಎಸ್‌ಸಿಎ ಧಾರವಾಡ ವಲಯ ಆಯೋಜಿಸಿರುವ ಎರಡನೇ ಡಿವಿಷನ್‌ ಕ್ರಿಕೆಟ್ ಟೂರ್ನಿಯ ಶುಕ್ರವಾರದ ಪಂದ್ಯದಲ್ಲಿ 134 ರನ್‌ಗಳ ಗೆಲುವು ಪಡೆದು ನಾಲ್ಕು ಅಂಕಗಳನ್ನು ತನ್ನದಾಗಿಸಿಕೊಂಡಿತು.

ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಟಾಲೆಂಟ್‌ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 300 ರನ್‌ ಕಲೆಹಾಕಿತು. ಅನುಕೃತ್ ಜಿ. (57), ಸಂಜಯ್‌ ಎಸ್‌.ಎಂ. (79) ಅರ್ಧಶತಕಗಳು ಇದಕ್ಕೆ ಕಾರಣವಾದವು. ಎದುರಾಳಿ ಗದುಗಿನ ಜನೋಪಂಥರ ಕ್ರಿಕೆಟ್‌ ಅಕಾಡೆಮಿ 32.1 ಓವರ್‌ಗಳಲ್ಲಿ 166 ರನ್‌ ಕಲೆಹಾಕಿತು. ಶ್ರವಣ ಟಿ. ಮತ್ತು ಭಾರ್ಗವ ನಾಡಿಗೇರ ತಲಾ ಮೂರು ವಿಕೆಟ್‌ಗಳನ್ನು ಉರುಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ’ಸಿ‘ ವಿರುದ್ಧ ಗದುಗಿನ ಸ್ಪೋರ್ಟ್ಸ್ ಅಕಾಡೆಮಿ 29 ರನ್‌ಗಳ ಗೆಲುವು ಪಡೆಯಿತು. ಮೊದಲು ಬ್ಯಾಟ್‌ ಮಾಡಿದ ಮುದ್ರಣ ನಗರಿಯ ತಂಡ 32.1 ಓವರ್‌ಗಳಲ್ಲಿ 185 ರನ್‌ ಗಳಿಸಿ ಆಲೌಟ್ ಆಯಿತು. ಈ ಗುರಿಯನ್ನು ಮುಟ್ಟುವ ಹಾದಿಯಲ್ಲಿ ವಿಫಲವಾದ ಬಿಡಿಕೆ ಕೊನೆಯ ಓವರ್‌ವರೆಗೆ ಹೋರಾಟ ಮಾಡಿ 156 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಬೆಳಗಾವಿಯಲ್ಲಿ ನಡೆದ ಪಂದ್ಯದಲ್ಲಿ ಅಲ್ಲಿನ ಆನಂದ ಕೋಚಿಂಗ್‌ ಕ್ರಿಕೆಟ್ ಅಕಾಡೆಮಿ 264 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಮೊದಲು ಬ್ಯಾಟ್‌ ಮಾಡಿ ಈ ತಂಡ ನೀಡಿದ್ದ 408 ರನ್‌ಗಳ ಗುರಿಯನ್ನು ಮುಟ್ಟಲು ಎದುರಾಳಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ಸ್ಪೋರ್ಟ್ಸ್‌ ಕ್ಲಬ್‌ ವಿಫಲವಾಯಿತು. ಇದು ಅಂತಿಮವಾಗಿ 143 ರನ್ ಗಳಿಸಿ ಆಲೌಟ್‌ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT