ಭಾನುವಾರ, ಆಗಸ್ಟ್ 25, 2019
28 °C

ಮನೆ ಕಳವು: ಇಬ್ಬರು ಆರೋಪಿಗಳ ಬಂಧನ

Published:
Updated:
Prajavani

ಹುಬ್ಬಳ್ಳಿ: ಅವಳಿ ನಗರದಲ್ಲಿ ಮನೆ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನವನಗರ ಎಪಿಎಂಸಿ ಠಾಣೆ ಪೊಲೀಸರು ಗುರುವಾರ ಬಂಧಿಸಿ, ಅವರಿಂದ ₹ 32,350 ಮೌಲ್ಯದ ಬೆಳ್ಳಿ, ಬಂಗಾರದ ಆಭರಣಗಳನ್ನು ಮತ್ತು ಒಂದು ಎಲ್‌ಇಡಿ ಟಿವಿಯನ್ನು ವಶಪಡಿಸಿಕೊಂಡಿದ್ದಾರೆ.

ರಾಮಲಿಂಗೇಶ್ವರನಗರದ ದುರ್ಗಾದೇವಿ ಗುಡಿ ಹತ್ತಿರದ ನಿವಾಸಿ ಧನ್ಯಕುಮಾರ ಆಂಜನೇಯ ಅರಸನಾಳ(30) ಮತ್ತು ನಾಗರಾಜ ದುರ್ಗಪ್ಪ ಬಾಚಣಕಿ(23) ಬಂಧಿತ ಆರೋಪಿಗಳು.

ನವನಗರದ ಪ್ರಜಾನಗರದಲ್ಲಿ ಆರೋಪಿಗಳನ್ನು ಬಂಧಿಸಿ, ಗಾಮನಗಟ್ಟಿ ಕರಿಯಮ್ಮದೇವಿ ಬಡಾವಣೆಯಲ್ಲಿ ಮನೆ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್‌ ಇನ್‌ಸ್ಪೆಕ್ಟರ್‌ ಪ್ರಭು ಸೂರಿನ್‌, ದಿಲೀಪ್‌ ನಿಂಬಾಳಕರ, ಸಿಬ್ಬಂದಿಗಳಾದ ಎಂ.ಎಚ್‌.ಶಿವರಾಜ, ಪ್ರಕಾಶ ಸೋಗಿ, ನಾಗರಾಜ ಗುಡಿಮನಿ, ಬಿ.ಎಫ್‌. ಬೆಳಗಾವಿ, ಎನ್‌.ಎಂ.ನೀಲಗಾರ, ಎಂ.ಸಿ.ಹೊನ್ನಪ್ಪನವರ, ಆರ್.ಎಸ್‌.ಹೊಂಕನದವರ, ಎಸ್‌.ಎಂ.ಕುರಹಟ್ಟಿ, ಎ.ಎಚ್‌.ಹುಗ್ಗಿ, ಕೆ.ಕೆ.ಕಾರಬಾರಿ, ವಿ.ಬಿ.ಪಾಟೀಲ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇವರಿಗೆ ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ್‌ ಬಹುಮಾನ ಘೋಷಿಸಿದ್ದಾರೆ.

Post Comments (+)