ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲಿಷ್ಟಕರ ಸಮಸ್ಯೆಗಳಿಗೆ ಆಪ್ತಸಲಹೆ ಅಗತ್ಯ: ಜಯಶ್ರೀ

Last Updated 11 ಅಕ್ಟೋಬರ್ 2020, 16:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಿತ್ಯದ ಬದುಕಿನಲ್ಲಿ ನಮ್ಮ ನಿರೀಕ್ಷೆಗಿಂತ ಹೆಚ್ಚು ಸಂಕೀರ್ಣವಾದ ಮತ್ತು ಕ್ಲಿಷ್ಟಕರವಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆಗ ಆಪ್ತ ಸಲಹೆ ಮತ್ತು ಸಮಾಲೋಚನೆ ಅಗತ್ಯವಾಗುತ್ತದೆ ಎಂದು ವೈದ್ಯೆ ಜಯಶ್ರೀ ಬೂದಿಹಾಳಮಠ ಹೇಳಿದರು.

ವಿಶ್ವ ಮಾನಸಿಕರೋಗ ದಿನದ ಅಂಗವಾಗಿ ಶನಿವಾರ ಮಜೇಥಿಯಾ ಫೌಂಡೇಷನ್‌ ಮೂರುಸಾವಿರ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಅತಿಯಾದ ಭಾವುಕತೆ, ದಣಿವು, ಕೋಪ, ಹಣಕಾಸಿನ ಪರಿಸ್ಥಿತಿ, ಅಸಹಾಯಕತೆ, ಭಯ, ನಿರಾಸೆ, ದುಖಃ ಹೀಗೆ ಅನೇಕ ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವರಿಗೆ ಆಪ್ತ ಸಮಾಲೋಚನೆ ಬೇಕಾಗುತ್ತದೆ’ ಎಂದರು.

ಫೌಂಡೇಷನ್‌ ಅಧ್ಯಕ್ಷ ಜಿತೇಂದ್ರ ಮಜೇಥಿಯಾ ಮಾತನಾಡಿ ‘ಜನಸಾಮಾನ್ಯರ ಸಹಜ ಸಮಸ್ಯೆಗಳನ್ನು ಮನಗಂಡು ಅವರಿಗೆ ನೆರವಾಗುವ ಉದ್ದೇಶದಿಂದ ನೆಮ್ಮದಿ ಕೇಂದ್ರ ಪ್ರಾರಂಭಿಸಲಾಗಿದೆ. ನಮ್ಮ ಸಂಸ್ಥೆ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯ ಮಾಡುತ್ತಿದೆ’ ಎಂದರು.

ಡಾ. ರಮೇಶ ಬಾಬು ಮಾತನಾಡಿ ‘ಬದುಕು ಸುಂದರವಾಗಿಸಿಕೊಳ್ಳಲು ಸಮಸ್ಯೆಗಳಿಂದ ದೂರ ಇರಬೇಕು. ಆಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ’ ಎಂದರು.

ನೆಮ್ಮದಿ ಕೇಂದ್ರದ ನಿರ್ದೇಶಕ ಡಾ. ವಿ.ಬಿ. ನಿಟಾಲಿ, ಪ್ರಲ್ಹಾದರಾವ, ಚನ್ನಬಸಪ್ಪ ಧಾರವಾಡಶೆಟ್ರು, ರಾಘವೇಂದ್ರ ಮುರಗೋಡ, ಸಂಜೀವ ಜೋಶಿ, ಗೀತಾ ಕಾಂಬಳೆ, ಸರಸ್ವತಿ ಮೆಹರವಾಡೆ, ಸಂಗೀತಾ ಇಜಾರದ, ರೂಪಾ ಅಂಗಡಿ, ಅಕ್ಕಮ್ಮ ಕಂಬಳಿ, ಎಸ್‌.ಎಸ್. ಕಮಡೊಳ್ಳಿಶೆಟ್ರು, ಮಹೇಶ ಪತ್ತಾರ, ಕೆ.ಜಿ. ಪೂಜಾರ, ಜಿ. ಕೃಷ್ಣಮೂರ್ತಿ, ಮಾರ್ತಾಂಡಪ್ಪ ಕತ್ತಿ, ಅಮರೇಶ ಹಿಪ್ಪರಗಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT