ಅಂಗೈನಲ್ಲೇ ಬೆಳೆ ಸಮೀಕ್ಷೆ ಮಾಹಿತಿ

7
ಇ–ಆಡಳಿತ ಇಲಾಖೆ ಪರಿಚಯಿಸಿರುವ ‘ಬೆಳೆ ದರ್ಶಕ್’

ಅಂಗೈನಲ್ಲೇ ಬೆಳೆ ಸಮೀಕ್ಷೆ ಮಾಹಿತಿ

Published:
Updated:
Deccan Herald

ಧಾರವಾಡ: ಬೆಳೆ ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿ ಹಾಗೂ ಸಮೀಕ್ಷೆ ನಡೆಸುವವರ ವಿವರ ರೈತರ ಅಂಗೈನಲ್ಲೇ ಇನ್ನು ಮುಂದೆ ಲಭ್ಯವಾಗಲಿದೆ.

ರಾಜ್ಯ ಸರ್ಕಾರದ ಇ–ಆಡಳಿತ ಇಲಾಖೆ ಪರಿಚಯಿಸಿರುವ ‘ಬೆಳೆ ದರ್ಶಕ್’ (Bele Darshak) ಆ್ಯಪ್ ಮೂಲಕ ರೈತರು ತಮ್ಮ ಮೊಬೈಲ್‌ನಲ್ಲೇ ತಮ್ಮ ಹೊಲದ ಸಮೀಕ್ಷೆ ನಡೆದ ಸಚಿತ್ರ ವರದಿ, ನಡೆದಿಲ್ಲವಾದರೆ ಸಮೀಕ್ಷೆ ನಡೆಸುವವರ ಹೆಸರು, ಮೊಬೈಲ್ ಸಂಖ್ಯೆ ಇತ್ಯಾದಿ ವಿವರ ಪಡೆಯಬಹುದಾಗಿದೆ.

ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಆ್ಯಂಡ್ರಾಯ್ಡ್ ಫೋನ್‌ ಅಪ್ಲಿಕೇಷನ್‌ ಉಚಿತವಾಗಿದೆ. ಇದನ್ನು ಬಳಸುವ ವಿಧಾನ ಅತ್ಯಂತ ಸರಳವಾಗಿದೆ.

ಬೆಳೆ ಸಮೀಕ್ಷೆ ಕಾರ್ಯ ಈವರೆಗೂ ಆರಂಭವಾಗದಿದ್ದರೆ ಕರೆ ಮಾಡಿ ಸಮೀಕ್ಷೆ ನಡೆಸುವವರನ್ನು ಸಂಪರ್ಕಿಸಬಹುದು. ದಾಖಲಿಸಿರುವ ಮಾಹಿತಿ ಸರಿಯಾಗಿಲ್ಲದಿದ್ದರೆ ತಾಲ್ಲೂಕು ಕಚೇರಿಗೆ ದೂರು ನೀಡಬಹುದಾಗಿದೆ.

ಸರಳವಾದ ಎರಡು ಪರದೆಯುಳ್ಳ ಆ್ಯಪ್ ಇದು. ಮೊದಲ ಪರದೆಯಲ್ಲಿ ಬೆಳೆ ಸಮೀಕ್ಷೆ ವರ್ಷ, ಋತುಮಾನ, ಜಿಲ್ಲೆ, ತಾಲ್ಲೂಕು, ಹೋಬಳಿ,
ಗ್ರಾಮ ಮತ್ತು ಸರ್ವೇ ನಂಬರ್ ಹಾಕಿ ವಿವರ ಪಡೆಯಬಹುದು. ಇದಾದ ನಂತರ ಸರ್ವೇ ನಂಬರ್‌/ ಹಿಸ್ಸಾ ವಿವರ ಸಿಗಲಿದೆ. ಇಲ್ಲಿ ಒಂದೇ ಸರ್ವೇ ನಂಬರ್‌ನಲ್ಲಿ ಒಂದಕ್ಕಿಂತ ಹೆಚ್ಚು ಹಿಸ್ಸೆಗಳು ಇದ್ದಲ್ಲಿ ಅದನ್ನು ಆಯ್ಕೆ ಮಾಡಬೇಕು. ಕೊನೆಯದಾಗಿ ಮಾಲೀಕರ ವಿವರ ಪಡೆದು ಖಚಿತಪಡಿಸಿಕೊಳ್ಳಬಹುದು.

ಇದಾದ ನಂತರ ಗ್ರಾಮದ ಬೆಳೆ ಸಮೀಕ್ಷೆ ನಡೆಸುವವರ ವಿವರಕ್ಕೆ ಹಾಗೂ ದಾಖಲಿಸಿದ ಬೆಳೆ ವಿವರಕ್ಕೆ ಪ್ರತ್ಯೇಕ ಎರಡು ಗುಂಡಿಗಳಿವೆ. ಸಮೀಕ್ಷೆದಾರರ ವಿವರ ಕ್ಲಿಕ್ಕಿಸಿದರೆ ಅವರ ಹೆಸರು ಹಾಗೂ ಮೊಬೈಲ್ ಸಂಖ್ಯೆ ಪರದೆ ಮೇಲೆ ಮೂಡಲಿದೆ. ದಾಖಲಿಸಿದ ಬೆಳೆ ವಿವರ ಕ್ಲಿಕ್ಕಿಸಿದರೆ ಬೆಳೆ ಹೆಸರು, ವಿಸ್ತೀರ್ಣ, ವರ್ಗ ಹಾಗೂ ಚಿತ್ರ ಸಿಗಲಿದೆ.

ಒಂದೊಮ್ಮೆ ಇಲ್ಲಿ ದಾಖಲಾದ ವಿವರ ಸರಿ ಇಲ್ಲ ಎಂದಾದಲ್ಲಿ ಆಯಾ ವ್ಯಾಪ್ತಿಯ ತಾಲ್ಲೂಕು ಕಚೇರಿ ಸಂಪರ್ಕಿಸಬಹುದು ಎಂಬ ಒಕ್ಕಣೆಯೂ ಈ ಪರದೆಯಲ್ಲಿ ಮೂಡುತ್ತದೆ.

ಪ್ಲೇ ಸ್ಟೋರ್‌ನಲ್ಲಿ ಬೆಳೆ ದರ್ಶಕ್ ಆ್ಯಪ್ ಲಭ್ಯ. ಕೇವಲ 3.8 ಎಂ.ಬಿ. ಗಾತ್ರದ ಈ ಆ್ಯಪ್‌ ಈಗಾಗಲೇ ಸಾವಿರಕ್ಕೂ ಅಧಿಕ ಡೌನ್‌ಲೋಡ್ ಆಗಿದೆ. ಇದರ ರೇಟಿಂಗ್ 4.1 ಇದೆ. ಜತೆಗೆ ಬಳಕೆದಾರರು ಆ್ಯಪ್ ಕುರಿತು ರಿವ್ಯೂನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !