ಸೋಮವಾರ, ಜುಲೈ 4, 2022
21 °C

ಸೈಕ್ಲಿಂಗ್‌: ರಾಜ್ಯ ತಂಡದ ಆಯ್ಕೆಗೆ ಜಮಖಂಡಿಯಲ್ಲಿ ಟ್ರಯಲ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ರಾಜಸ್ಥಾನದ ಬಿಕಾನೇರ್‌ನಲ್ಲಿ ನ. 13ರಿಂದ 16ರ ತನಕ ಆಯೋಜನೆಯಾಗಿರುವ 24ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ತಂಡವನ್ನು ಆಯ್ಕೆ ಮಾಡಲು ಅ. 22ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಟ್ರಯಲ್ಸ್‌ ನಡೆಯಲಿದೆ.

14, 16, 18 ಮತ್ತು 23 ವಯೋಮಾನದ ಬಾಲಕ, ಬಾಲಕಿಯರಿಗೆ, ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಟ್ರಯಲ್ಸ್‌ ಜರುಗಲಿದೆ. ಪುರುಷರಿಗೆ ಇಂಡಿಯನ್ ಮೇಡ್ ಸೈಕ್ಲಿಂಗ್‍ನಲ್ಲಿ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ. ವೈಯಕ್ತಿಕ ಟೈಮ್‌ ಟ್ರಯಲ್ಸ್‌ ಆಧಾರದ ಮೇಲೆ ತಂಡದ ಆಯ್ಕೆಯಾಗಲಿದೆ. ರೋಡ್‌ ಸೈಕ್ಲಿಂಗ್‌ ಸ್ಪರ್ಧೆಗೆ ನಿಗದಿಪಡಿಸಿದ ಸೈಕಲ್‌ ಮತ್ತು ಹೆಲ್ಮೆಟ್‌ ಬಳಸುವುದು ಕಡ್ಡಾಯ ಎಂದು ರಾಜ್ಯ ಸೈಕ್ಲಿಂಗ್ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಶೈಲ ಎಂ. ಕುರಣಿ ತಿಳಿಸಿದ್ದಾರೆ.

ರಾಜ್ಯ ಸೈಕ್ಲಿಂಗ್ ಸಂಸ್ಥೆಯಿಂದ ನೋಂದಣೆ ಮಾಡಿಕೊಂಡ ಸಂಸ್ಥೆಗಳು ಹಾಗೂ ಶಾಲಾ, ಕಾಲೇಜುಗಳು ಟ್ರಯಲ್ಸ್‌ ದಿನ ಬೆಳಿಗ್ಗೆ 7 ಗಂಟೆ ಒಳಗೆ ಜಮಖಂಡಿಯಲ್ಲಿ ಹಾಜರಿರಬೇಕು. ಇನ್ನಷ್ಟು ಮಾಹಿತಿಗೆ ಕುರಣಿ ಅವರ ಮೊ. 9008377875 ಸಂಪರ್ಕಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು