ಧಾರವಾಡ: ‘ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಅವರಿಗೆ ಬೆದರಿಕೆಯೊಡ್ಡಿರುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಒತ್ತಾಯಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾರ್ಯನಿರ್ವಹಿಸುವ ಪಕ್ಷ, ಸಂಘಟನೆಯಲ್ಲಿ ಕೆಲವೊಬ್ಬರ ವಿಚಾರಧಾರೆ ಭಿನ್ನ ಇರಬಹುದು. ಅದನ್ನು ನಿವಾರಿಸಲು ವಿಧಾನಗಳಿರುತ್ತವೆ. ಕೊಲೆಗೆ ಪ್ರಯತ್ನಿಸಿರುವುದು ಗಂಭೀರವಾದ ವಿಚಾರ. ತಕ್ಷಣವೇ ಪೊಲೀಸರು ಕ್ರಮ ವಹಿಸಬೇಕು’ ಎಂದರು.
‘ಮಾದಕ ಪದಾರ್ಥ ಸೇವಿಸಿ ಅಡ್ಡಾಡುವವರು ಹೀಗೆ ಮಾಡಿದ್ದಾರೆ. ಮಾದಕ ಪದಾರ್ಥ ಸೇವಿಸುವವರ ವಿರುದ್ಧ ಕ್ರಮ ಜರುಗಿಸವುದರ ಜತೆಗೆ ಡ್ರಗ್ಸ್ ಎಲ್ಲಿಂದ ಪೂರೈಕೆಯಾಗುತ್ತದೆ, ಪೆಡ್ಲರ‍್ಸ್, ಡೀಲ್ಸರ್ ಯಾರು ಎಂಬುದನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.