ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಾರಗೊಂಡ ಸಖಿ ಮತಗಟ್ಟೆಗಳು

Last Updated 22 ಏಪ್ರಿಲ್ 2019, 14:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಿಳಾ ಮತದಾರರಿಗಾಗಿ ತೆರೆಯಲಾಗಿರುವ ಸಖಿ ಮತಗಟ್ಟೆಗಳು ತಳಿರು–ತೋರಣ, ರಂಗೋಳಿ, ಹೂ–ಗಿಡ–ಬಲೂನ್‌ಗಳ ಅಲಂಕಾರದೊಂದಿಗೆ ಮದುವಣಗಿತ್ತಿಯಂತೆ ಸಿಂಗಾರಗೊಂಡು ಮತದಾರರನ್ನು ಸ್ವಾಗತಿಸುತ್ತಿವೆ.

ಹುಬ್ಬಳ್ಳಿಯ ತೊರವಿಗಲ್ಲಿ, ಬಾಸೆಲ್ ಮಿಷನ್, ವಿದ್ಯಾನಗರದ ವೇಲಾಂಗಣಿ ಶಿಕ್ಷಣ ಸಂಸ್ಥೆ ಹಾಗೂ ಹೊಸೂರಿನ ಸರ್ಕಾರ ಕಲಾ ತರಬೇತಿ ಸಂಸ್ಥೆಯಲ್ಲಿ ಸ್ಥಾಪಿಸಲಾಗಿರುವ ಈ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತ ಹಾಕಲು ಬರುವ ಮಹಿಳೆಯರ ಮಕ್ಕಳ ಲಾಲನೆಗೆ ತಾತ್ಕಾಲಿಕ ವ್ಯವಸ್ಥೆ ಹಾಗೂ ಮೊದಲ ಬಾರಿಗೆ ಮತ ಚಲಾಯಿಸುವ ಯುವತಿಯರು ಫೋಟೊ ತೆಗೆದುಕೊಳ್ಳಲು ಸೆಲ್ಫಿ ಸ್ಟ್ಯಾಂಡ್ ಇಲ್ಲಿರುವುದು ವಿಶೇಷ.

ಪ್ರಜಾಪ್ರಭುತ್ವದ ಹಬ್ಬವಾದ ಮತದಾನದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಚುನಾವಣಾ ಆಯೋಗವು ಸಖಿ ಮತಗಟ್ಟೆ ಕಲ್ಪನೆಯನ್ನು ರೂಪಿಸಿದೆ. ಆಯೋಗದ ನಿರ್ದೇಶನದಂತೆ ಈ ಮತಗಟ್ಟೆಗಳಲ್ಲಿ ಅಂಗವಿಕಲರು, ಗರ್ಭಿಣಿಯರು, ಬಾಣಂತಿಯರು, ಚಿಕ್ಕ ಮಕ್ಕಳ ತಾಯಾಂದಿರು, ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು, ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಶಾಲಾ ಸಿಬ್ಬಂದಿ ಮತಗಟ್ಟೆಗಳನ್ನು ಸಿಂಗರಿಸುವ ಮೂಲಕ, ವಿಶೇಷ ಕಳೆ ತಂದಿದ್ದಾರೆ. ಶಾಲಾ ಕಾಲೇಜುಗಳ ಎನ್.ಎಸ್.ಎಸ್. ಹಾಗೂ ಎನ್.ಸಿ.ಸಿ ವಿದ್ಯಾರ್ಥಿಗಳು ಸಹಾಯಕರುಗಳಾಗಿ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಅಂಗವಿಕಲರಿಗೆ ಪತ್ಯೇಕ ಮತಗಟ್ಟೆ

ಅಂಗವಿಕಲರ ಮತದಾನವನ್ನು ಪ್ರೋತ್ಸಾಹಿಸುವ ಸಲುವಾಗಿ, ಅವರಿಗಾಗಿ ಪ್ರತ್ಯೇಕ ಮತಗಟ್ಟೆ ಸ್ಥಾಪಿಸಲಾಗಿದೆ. ಅಲ್ಲಿಗೆ ಬರಲು ವಾಹನ ವ್ಯವಸ್ಥೆ ಹಾಗೂ ವೀಲ್‌ಚೇರ್‌ ವ್ಯವಸ್ಥೆ ಸಹ ಕಲ್ಪಿಲಾಗಿದ್ದು, ಮತಗಟ್ಟೆಯನ್ನು ಆಕರ್ಷಣೀಯವಾಗಿ ಸಿಂಗರಿಸಲಾಗಿದೆ.

ಹುಬ್ಬಳ್ಳಿಯ ಗಣೇಶಪೇಟೆಯ ಸರ್ಕಾರಿ ಮಾದರಿ ಕನ್ನಡ ಗಂಡುಮಕ್ಕಳ ಶಾಲೆ ಸಂಖ್ಯೆ 8 ಹಾಗೂ ಹೊಸೂರಿನ ಸರ್ಕಾರಿ ಮಾದರಿ ಕನ್ನಡ ಗಂಡುಮಕ್ಕಳ ಶಾಲೆ ಸಂಖ್ಯೆ 16ರಲ್ಲಿ ಅಂಗವಿಕಲರ ಮತಗಟ್ಟೆ ಸ್ಥಾಪಿಸಲಾಗಿದೆ. ಇಲ್ಲಿ ಅಂಗವಿಕಲರನ್ನೇ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT