ಅಗಲಿದ ಅಜಾತಶತ್ರುಗೆ ಅಶೃತರ್ಪಣ

7

ಅಗಲಿದ ಅಜಾತಶತ್ರುಗೆ ಅಶೃತರ್ಪಣ

Published:
Updated:
Deccan Herald

ಧಾರವಾಡ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಗಲಿಕೆಗೆ ನಗರದ ಹಲವೆಡೆ ಸಾರ್ವಜನಿಕರು ಹಾಗೂ ಬಿಜೆಪಿ ಕಾರ್ಯಕರ್ತರು ಮುಂಬತ್ತಿ ಹಚ್ಚಿ ಸಂತಾಪ ವ್ಯಕ್ತಪಡಿಸಿದರು.

ಇಲ್ಲಿನ ಸುಭಾಸರಸ್ತೆಯಲ್ಲಿರುವ ಬಿಜೆಪಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು ಮುಂಬತ್ತಿ ಹಚ್ಚಿ ‘ಅಟಲ್ ಜೀ ಅಮರ್ ರಹೇ’ ಎಂದು ಘೋಷಣೆ ಕೂಗಿದರು. ವಾಜಪೇಯಿ ಅವರು ಅಗಲಿದ ಸುದ್ದಿ ತಿಳಿದ ತಕ್ಷಣ ಪಕ್ಷದ ಕಚೇರಿ ಎದುರು ಜಮಾಯಿಸಿದ ಮುಖಂಡರು ಹಾಗೂ ಕಾರ್ಯಕರ್ತರು ಶ್ರದ್ಧಾಂಜಲಿಗೆ ಸಜ್ಜಾದರು. ಆದರೆ ಕಚೇರಿ ಬೀಗಕ್ಕಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾದರು.

ಈ ಸಂದರ್ಭದಲ್ಲಿ ಸೀಮಾ ಮಸೂತಿ, ಅರವಿಂದ ಏಗನಗೌಡರ, ವಿಜಯಾನಂದ ಶೆಟ್ಟಿ, ಸಂಜಯ ಕಪಟಕರ್, ಶಂಕರ ಶೇಳ್ಕೆ ಇತರರು ಇದ್ದರು. ಕಾರ್ಯಕರ್ತರೊಂದಿಗೆ ಕೆಲ ಸಾರ್ವಜನಿಕರೂ ಸೇರಿ ಮುಂಬತ್ತಿ ಹಚ್ಚಿ ಅಗಲಿದ ನಾಯಕನಿಗೆ ಸಂತಾಪ ಸೂಚಿಸಿದರು.

ಟಿಕಾರೆ ರಸ್ತೆಯಲ್ಲಿರುವ ಹನುಮಾನ್ ಕಾಂಪ್ಲೆಕ್ಸ್‌ನಲ್ಲಿ ವರ್ತಕರು ಸೇರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಅಗಲಿದ ನಾಯಕನ ನೆನೆದು ಸಂತಾಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೃಷ್ಣ ಕುಲಕರ್ಣಿ, ನಾಗರಾಜ ಕುಲಕರ್ಣಿ, ನಾಸೀರ್‌, ಶ್ರೀಶೈಲ, ನಾರಾಯಣ, ಸಂತೋಷ ಇದ್ದರು.

ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜಿ.ವಿ.ಕಲಾಬಳಗ ಹಮ್ಮಿಕೊಂಡಿದ್ದ ರಕ್ತರಾತ್ರಿ ನಾಟಕವನ್ನು ಮುಂದೂಡಲಾಯಿತು. ವಜಪೇಯಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !