ಧಾರವಾಡ: ‘ಗಿರಿಜನ ಸಮುದಾಯಗಳ ಸಾಂಸ್ಕೃತಿಕ ವೈಭವ, ಪರಂಪರೆ ಬಿಂಬಿಸಲು ಮೇ 24ರಂದು ನವದೆಹಲಿಯಲ್ಲಿ ಜನಜಾತಿ ಸಾಂಸ್ಕೃತಿಕ ಸಮಾಗಮ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತಮಾಡಿದ ಅವರು, ಬಿರ್ಸಾ ಮುಂಡಾ ಅವರ 150ನೇ ಜಯಂತಿ ಅಂಗವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ ಗಿರಿಜನ ಸಮುದಾಯದವರು ಭಾಗವಹಿಸುವರು. ಅಂದು ಮಧ್ಯಾಹ್ನ ನವದೆಹಲಿಯ ಐದು ಭಾಗಗಳಿಂದ ಶೋಭಾಯಾತ್ರೆ ನಡೆಯಲಿದೆ’ ಎಂದರು.

‘ವನವಾಸಿ, ಗ್ರಾಮವಾಸಿ, ನಗರವಾಸಿ ನಾವೆಲ್ಲರೂ ಭಾರತವಾಸಿಗಳು ನಮ್ಮೆಲ್ಲರ ರಕ್ತ ಒಂದೇ’ ಘೋಷವಾಕ್ಯದಡಿ ಈ ಸಮಾವೇಶ ನಡೆಯಲಿದೆ. ಕೆಂಪುಕೋಟೆಯ ಬಳಿ ಸಂಜೆ ಜರುಗುವ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಷಣ ಮಾಡುವರು’ ಎಂದರು.

‘ಬಿರ್ಸಾ ಮುಂಡಾ ಅವರ ಪರಂಪರೆಯನ್ನು ಸ್ಮರಿಸಿ ಗೌರವಿಸುವುದು, ಜನಜಾತಿ ಸಮುದಾಯಗಳ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಆಚರಿಸುವುದು, ಸಾಂಸ್ಕೃತಿಕ ವಿನಿಮಯ ಮತ್ತು ಸಂವಾದಕ್ಕಾಗಿ ರಾಷ್ಟ್ರೀಯ ವೇದಿಕೆಯನ್ನು ನಿರ್ಮಿಸುವುದು, ಸಮಕಾಲೀನ ಭಾರತದಲ್ಲಿ ಗಿರಿಜನರ ಜ್ಞಾನ ಪರಂಪರೆಯನ್ನು ಸಾರುವುದು, ನಾಗರಿಕತೆಯ ಗುರುತನ್ನು ಬಲಪಡಿಸುವುದು ಈ ಸಮಾವೇಶದ ಉದ್ದೇಶಗಳಾಗಿವೆ’ ಎಂದು ತಿಳಿಸಿದರು.

ಆಮಿಷಕ್ಕೊಳಗಾಗಿ ಮತಾಂತರಗೊಂಡವರನ್ನು ಮನವೊಲಿಸಿ ಪುನಃ ಅವರ ಧರ್ಮಕ್ಕೆ ಕರೆತರುವ ಕೆಲಸವನ್ನು ಕಾನೂನು ರೀತಿಯಲ್ಲಿ ಮಾಡುತ್ತಿದ್ದೇವೆ ಎಂದರು. ದೊಂಡು ಪಾಟೀಲ, ಶಿವಾಜಿ ಕಡ್ಡೆಪ್ಪನವರ, ರಮೇಶ ಕೆಳಗಿನಮನಿ, ರವೀಂದ್ರ ಯಡಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-24-128415929

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.