ಶಾಲ್ಮಲಾ ನದಿಯ ಸಂಪೂರ್ಣ ಅಧ್ಯಯನ ಅಗತ್ಯ

7

ಶಾಲ್ಮಲಾ ನದಿಯ ಸಂಪೂರ್ಣ ಅಧ್ಯಯನ ಅಗತ್ಯ

Published:
Updated:
Deccan Herald

ಧಾರವಾಡ: ‘ಸರಸ್ವತಿ ನದಿಯ ಅಧ್ಯಯನದಂತೆ ಶಾಲ್ಮಲಾ ನದಿಯ ಉಗಮಸ್ಥಾನದಿಂದ ಅದು ಸಮುದ್ರ ಸೇರುವ ವರೆಗಿನ ಸಂಪೂರ್ಣ ಅಧ್ಯಯನ ಆಗಬೇಕಾಗಿದೆ’ ಎಂದು ಪ್ರಾಧ್ಯಾಪಕ ಹರ್ಷವರ್ಧನ ಶೀಲವಂತ ಹೇಳಿದರು.

ನಗರದ ಶಾಲ್ಮಲಾ ನದಿ ಉಗಮ ಸ್ಥಾನದಲ್ಲಿ ಶನಿವಾರ ನೇಚರ ಫಸ್ಟ್ ಇಕೋ ವಿಲೇಜ್ ವತಿಯಿಂದ ವಿಶ್ವ ಪರಿಸರ ಸಂರಕ್ಷಣಾ ದಿನದ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾವಿರಾರು ವರ್ಷಗಳ ಹಿಂದೆ ಋಗ್ವೇದ ಕಾಲದ ಸಮಯದಲ್ಲಿ ಸರಸ್ವತಿ ನದಿಯು ಹಿಂದೂ ಸಂಪ್ರದಾಯದ ಅವಿಭಾಜ್ಯ ಅಂಗವಾಗಿತ್ತು. ಆದರೆ, ನಂತರದ ದಿನಗಳಲ್ಲಿ ಸರಸ್ವತಿ ನದಿಯು ತನ್ನ ಅಸ್ತಿತ್ವನ್ನು ಕಳೆದುಕೊಂಡಿತು ಎಂದು ನಂಬಿದ್ದ ನಮಗೆ, ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳ ಬಳಿಕ ಅದು ಇನ್ನೂ ಅಸ್ತಿತ್ವದಲ್ಲಿದ್ದು, ಕಾಲಕ್ರಮೇಣ ಆ ನದಿಯೇ ಇಂದಿನ ಗಾಘ್ಗರ-ಹಕ್ಕರ್ ನದಿಯು ಹರಿಯುವ ಹಾಗೂ ಬತ್ತಿದ ಪ್ರದೇಶ ಎಂದು ಕಂಡು ಹಿಡಿಯಲಾಗಿದೆ’ ಎಂದರು.

‘ಸರಸ್ವತಿ ನದಿಯು, ಇಂದಿನ ಪಾಕಿಸ್ತಾನ ಮತ್ತು ಉತ್ತರ ಭಾರತದ ರಾಜಸ್ಥಾನ, ಹರಿಯಾಣ ಹಾಗೂ ಗುಜರಾತ ಭಾಗಗಳಲ್ಲಿದ್ದುದರ ಬಗ್ಗೆ ವಿಜ್ಞಾನ ಲೋಕ ಅಪೂರ್ವ ಮಾಹಿತಿಯನ್ನು ಕಲೆ ಹಾಕಿದ್ದು, ಅದೇ ಮಾದರಿಯಲ್ಲಿ ನಮ್ಮ ಶಾಲ್ಮಲಾ ನದಿ ಉಗಮಸ್ಥಾನದಿಂದ ಅದರ ಸಮುದ್ರ ಸೇರುವವರೆಗೆ ಸಂಪೂರ್ಣ ಅಧ್ಯಯನವಾಗಬೇಕಿದೆ’ ಎಂದು ಹೇಳಿದರು.

ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಮಾತನಾಡಿ, ‘ಯಾವಾಗಲೂ ಜಲದೊಂದಿಗೆ ಜನ ಬೆರೆಯಬೇಕಾಗಿದೆ. ಪುರಾತನ ಕಾಲದಿಂದಲೂ ನಾವು ನೀರಿದ್ದಲ್ಲಿಯೇ ಜನವಸತಿ ಎಂಬುದನ್ನು ತಿಳಿದಿದ್ದೇವೆ. ಆದರೆ, ಹಿಂದಿನಂತೆ ನಾವು ನೀರನ್ನು ಗೌರವಿಸುತ್ತಿಲ್ಲ. ಹೀಗಾಗಿ ನೀರು ಮಲೀನಗೊಳ್ಳುತ್ತಿದ್ದು, ಅದನ್ನು ಸಂದಿಗ್ಧ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದೇವೆ. ಅದಕ್ಕಾಗಿ ಜಲದೊಂದಿಗೆ ಜನ ಬೆರೆಯುವ ಅವಶ್ಯಕತೆ ಇದೆ’ ಎಂದರು.

ಇದೇ ಸಂದರ್ಭದಲ್ಲಿ ಶಾಲ್ಮಲಾ ಉಗಮ ಸ್ಥಾನಕ್ಕೆ ಧಕ್ಕೆಯಾಗದಂತೆ ಅದನ್ನು ಕಾಯ್ದುಕೊಂಡು ಸಾರ್ವಜನಿಕರಿಗಾಗಿಯೇ ಮೀಸಲಿಟ್ಟರುವ  ರುದ್ರಪ್ಪ ಹರಕುಣಿ ಮತ್ತು ತಲೆತಲಾಂತರದಿಂದ ಅದನ್ನು ಪೂಜಿಸಿಕೊಂಡು ಬಂದಿರುವ ಸೋಮಯ್ಯ ಬಳ್ಳಾರಿ ಅವರನ್ನು ಸನ್ಮಾನಿಸಲಾಯಿತು. ನಂತರ ಶಾಲ್ಮಲಾ ಉಗಮ ಸ್ಥಾನದ ಆವರಣದಲ್ಲಿ ಪಂಚವಟಿ ಸಸಿ ನೆಡಲಾಯಿತು.

ಇಕೋ ವಿಲೇಜ್‌ ಸಂಸ್ಥಾಪಕ ಪಂಚಯ್ಯ ಹಿರೇಮಠ ಶಾಲ್ಮಲೆಗೆ ಬಾಗೀನ ಅರ್ಪಿಸಿದರು. ಸೆಂಟರ್‌ನ ಕಾರ್ಯದರ್ಶಿ ಪ್ರಕಾಶ ಗೌಡರ, ಅನೀಲ ಅಳ್ಳೊಳ್ಳಿ, ಶಿವಾಜಿ ಸೂರ್ಯವಂಶಿ, ವಿರೇಶ ಕೆಲಗೇರಿ, ಅಸ್ಲಂ ಅಬ್ಬಿಹಾಳ, ಗಿರೀಶ, ನಯನಾ ಯಾಲಕ್ಕಿಶೆಟ್ಟರ್, ಆರೀಫ್‌, ಕುಮಾರ ಹಿರೇಮಠ, ಪ್ರವೀಣ ಪಾಟೀಲ ಇದ್ದರು. 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !