ಧಾರವಾಡ: ಅನುಭವ ಮಂಟಪ ಸಂಘ ಹಾಗೂ ಬಸವಶಾಂತಿ ಮಿಷನ್ ಟ್ರಸ್ಟ್ ವತಿಯಿಂದ ನಗರದ ಯಾಲಕ್ಕಿ ಶೆಟ್ಟರ್ ಕಾಲೊನಿಯ ಬಸವಶಾಂತಿ ಮಿಷನ್ ಟ್ರಸ್ಟ್ನಲ್ಲಿ ಏ.20ರಂದು ಬಸವೇಶ್ವರ, ಅಕ್ಕಮಹಾದೇವಿ ಜಯಂತ್ಯುತ್ಸವ ಆಯೋಜಿಸಲಾಗಿದೆ ಎಂದು ಸಂಘದ ಮಹಿಳಾ ವೇದಿಕೆ ಮುಖ್ಯಸ್ಥೆ ವೀಣಾ ಬಿರಾದಾರ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಾಹ್ನ 3.30ಕ್ಕೆ ಅಲಂಕೃತ ರಥದಲ್ಲಿ ಬಸವೇಶ್ವರ, ಅಕ್ಕಮಹಾದೇವಿ ಅವರ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಸಪ್ತಗಿರಿ ಲೇಔಟ್ ಉದ್ಯಾನದಿಂದ ಹೊರಟು ಶಂಕರಮಠ, ಹುಲ್ಲೂರ ಬಿಲ್ಡಿಂಗ್ ಮಾರ್ಗವಾಗಿ ಹಾದಿ ಬಸವಶಾಂತಿ ಮಿಷನ್ ಟ್ರಸ್ಟ್ ತಲುಪಲಿದೆ. ವಿವಿಧ ತಂಡಗಳಿಂದ ವಚನ ಗಾಯನ, ನೃತ್ಯಗಳು ಜರುಗಲಿವೆ ಎಂದರು.

ಸಂಜೆ 5.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಶಾಸಕ ಅರವಿಂದ ಬೆಲ್ಲದ ಅವರು ಉದ್ಘಾಟನೆ ನೆರವೇರಿಸುವರು. ಸಿಎಸ್ಐ ಕಾಲೇಜಿನ ಪ್ರಾಚಾರ್ಯ ಪ್ರೊ.ಶಂಭು ಹೆಗಡಾಳ ಅತಿಥಿಯಾಗಿ ಪಾಲ್ಗೊಳ್ಳುವರು. ಅನುಭವ ಮಂಟಪದ ಅಧ್ಯಕ್ಷ ವಿಜಯ ಅಗಡಿ ಅಧ್ಯಕ್ಷತೆ ವಹಿಸುವರು. ಬಸವಶಾಂತಿ ಮಿಷನ್ ಅಧ್ಯಕ್ಷ ಮಹಾದೇವ ಹೊರಟ್ಟಿ ಭಾಗವಹಿಸುವರು ಎಂದರು.

ಅನುಭವ ಮಂಟಪ ಸಂಘದ ಅಧ್ಯಕ್ಷ ವಿಜಯ ಅಗಡಿ ಮಾತನಾಡಿ, ಗಾಯಕ ಮೃತ್ಯುಂಜಯ ಶೆಟ್ಟರ್ ಮತ್ತು ವೀಣಾ ಬಿರಾದಾರ ಅವರನ್ನು ಸನ್ಮಾನಿಸಲಾಗುವುದು. ಎಸ್ಎಲ್ಎಲ್ಸಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು’ ಎಂದರು.

ಸದಯ್ಯ ಪಾಲಭಾವಿಮಠ, ಅಶೋಕ ಕೋಳಕೂರ, ಶಶಿಕಲಾ ಕೋಳಕೂರ, ಸುಮಿತ್ರಾ ಯಲಿಗಾರ, ಸುವರ್ಣಾ ಯಲಿಗಾರ, ಶ್ರೀಕಾಂತ ಯಲಿಗಾರ ಸುದ್ದಿಗೋಷ್ಠಿಯಲ್ಲಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-24-380804882

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.