ಧಾರವಾಡ: ‘ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಗರ ಸಾರಿಗೆ ಘಟಕದ ನೌಕರ ಶರೀಫಸುತ ಎಲ್.ಆರ್.ಬೂದಿಹಾಳ ಅವರು ಇನ್ನೆರಡು ದಿನಗಳಲ್ಲಿ ನಿವೃತ್ತಿಯಾಗಲಿದ್ದು, ನಗರದಲ್ಲಿ ಮೇ 31ರಂದು ಅವರ ಅಭಿನಂದಾನ ಸಮಾರಂಭ ಏರ್ಪಡಿಸಲಾಗಿದೆ’ ಎಂದು ಅಭಿನಂದನಾ ಸಮಿತಿ ಸದಸ್ಯ ರಾಮು ಮೂಲಗಿ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ಮಧ್ಯಾಹ್ನ 12 ಗಂಟೆಗೆ ಸಮಾರಂಭ ಆರಂಭವಾಗಲಿದೆ. ಮನಸೂರು ಮಠದ ಬಸವರಾಜ ದೇವರು ಉದ್ಘಾಟನೆ ನೆರವೇರಿಸುವರು. ಉಪ್ಪಿನಬೆಟಗೇರಿಯ ಕುಮಾರ ವಿರೂಪಾಕ್ಷೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಎನ್ಡಬ್ಲುಕೆಆರ್ಟಿಸಿ ಮುಖ್ಯಸ್ಥಂಚಾರ ವ್ಯವಸ್ಥಾಪಕ ವಿವೇಕಾನಂದ ವಿಶ್ವಜ್ಞ ಅಧ್ಯಕ್ಷತೆ ವಹಿಸುವರು’ ಎಂದರು.

‘ಶರೀಫಸುತ ಎಲ್.ಆರ್.ಬೂದಿಹಾಳ ‘ಯಾರ ಬರದಾರ ಕವನ’ ಕವನ ಸಂಕಲನ ಹಾಗೂ ‘ತುತ್ತಿನ ಚೀಲ ಸುಟ್ಟಿತು ಶೀಲ’ ನಾಟಕ ಕೃತಿಗಳನ್ನು ಬೀಳಗಿ ಶಾಸಕ ಜೆ.ಟಿ.ಪಾಟೀಲ ಬಿಡುಗಡೆಗೊಳಿಸುವರು. ಹುಬ್ಬಳ್ಳಿಯ ಜಿ.ವಿ.ಕಲಾ ಬಳಗದವರು ಎಲ್.ಆರ್.ಬೂದಿಯಾಳ ವಿರಚಿತ, ಗದಿಗಯ್ಯ ಮಠ ನಿರ್ದೇಶನದ ‘ಮುಡಿಯೇರದ ಮಲ್ಲಿಗೆ’ ನಾಟಕವನ್ನು ಪ್ರಸ್ತುತಪಡಿಸುವರು’ ಎಂದರು.

ಸಿ.ಎನ್.ಹಿರೇಮಠ, ಗದಿಗಯ್ಯ ಹಿರೇಮಠ, ರಾಜೇಶ್ವರಿ ಕಿರೇಸೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-24-1761868537

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.