ಧಾರವಾಡ: ನಗರದ ಕೇಂದ್ರ ಕಾರಾಗೃಹದೊಳಕ್ಕೆ ತಂಬಾಕು, ಗುಟ್ಕಾ, ಸಿಗರೇಟು, ಬೀಡಿ ಮೊದಲಾದವನ್ನು ಸಾಗಿಸಿದ ಆರೋಪದಡಿ ಜೈಲ್ ವಾರ್ಡರ್ಗಳಾದ ಅಲ್ತಾಪ್ ಶೇಖ್ಸನದಿ, ರಾಜು ಸೊಲಬಣ್ಣವರ ಹಾಗೂ ಆಟೊ ರಿಕ್ಷಾ ಚಾಲಕ ಮುನಿರ್ ಅಹಮದ್ ಬೆಟಗೇರಿ ಅವರನ್ನು ಬಂಧಿಸಲಾಗಿದೆ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಆರೋಪಿಗಳಿಂದ ₹ 75 ಸಾವಿರ ಮೌಲ್ಯದ (ಗುಟ್ಕಾ, ತಂಬಾಕು, ಲೈಟರ್, ಸಿಗರೇಟು, ಬೀಡಿ) ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ಕೋರ್ಟ್ಗೆ ಹಾಜರುಪಡಿಸಲಾಗಿದೆ’ ಎಂದು ತಿಳಿಸಿದರು.

‘ಮಾರ್ಚ್ 8ರಂದು 3 ಗಂಟೆ ಹೊತ್ತಿನಲ್ಲಿ ಜೈಲಿನೊಳಕ್ಕೆ ಗುಟ್ಕಾ, ತಂಬಾಕು, ಅಡಿಕೆ ಮೊದಲಾದ ಪದಾರ್ಥಗಳಿದ್ದ ಎರಡು ಚೀಲಗಳನ್ನು ಸಾಗಿಸಿರುವುದು ಜೈಲು ಅಧಿಕಾರಿಗಳ ಗಮನಕ್ಕೆ ಬಂದಿದೆ. ಹಿರಿಯ ಅಧಿಕಾರಿಗಳು ಸಿ.ಸಿ. ಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ವೀಕ್ಷಿಸಿ ಪರಿಶೀಲಿಸಿದ್ದಾರೆ. ಜೈಲಿನೊಳಕ್ಕೆ ನಿಷೇಧಿತ ಪದಾರ್ಥಗಳ ಸಾಗಣೆಯಾಗಿರುವ ಕುರಿತು ಜೈಲು ಅಧಿಕಾರಿ ನಿರ್ಮಲಾ ಅವರು ಉಪನಗರ ಠಾಣೆಗೆ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ’ ಎಂದರು.

‘ನಿಷೇಧಿತ ಪದಾರ್ಥಗಳನ್ನು ಜೈಲಿನೊಳಕ್ಕೆ ಒಯ್ದು ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ಇದೆ. ಜೈಲು ಸಿಬ್ಬಂದಿಯೇ ಕೃತ್ಯದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಈ ಕೃತ್ಯದ ಹಿಂದೆ ಯಾರ್ಯಾರು ಇದ್ದಾರೆ ಎಂದು ಸಮಗ್ರವಾಗಿ ತನಿಖೆ ಮಾಡಲಾಗುವುದು’ ಎಂದರು.

‘ಕೇಂದ್ರ ಕಾರಾಗೃಹ ಪ್ರದೇಶವು ಬಹಳ ವಿಸ್ತಾರವಾಗಿದೆ. ಒಳಗಿನ ಪ್ರದೇಶದಲ್ಲಿ ಬೆಳೆಗಳನ್ನು ಬೆಳೆಯಲಾಗಿದೆ. ಕೊಟ್ಟಿಗೆಗಳು ಇವೆ. ಪೊಲೀಸರು ತಪಾಸಣೆ ನಡೆಸುವ ಸಂದರ್ಭದಲ್ಲಿ ನಿಷೇಧಿತ ಪದಾರ್ಥಗಳನ್ನು ಸಿಬ್ಬಂದಿ ಅಡಗಿಸಿಟ್ಟಿರುವ ಸಾಧ್ಯತೆ ಇರುತ್ತದೆ’ ಎಂದು ಉತ್ತರಿಸಿದರು.

‘ಕ್ರಿಕೆಟ್ ಬೆಟ್ಟಿಂಗ್ ಜಾಲ: ನಿಗಾ’

‘ಹುಬ್ಬಳ್ಳಿ–ಧಾರವಾಡ ಅವಳಿನಗರದಲ್ಲಿ ಬೆಟ್ಟಿಂಗ್ನಂಥ ಕೃತ್ಯಗಳಲ್ಲಿ ತೊಡಗುವವರ ಬಗ್ಗೆ ಕ್ರಮ ವಹಿಸುವ ನಿಟ್ಟಿನಲ್ಲಿ ಪ್ರತಿ ಠಾಣೆವಾರು ಸಭೆ ನಡೆಸಲು ಸೂಚನೆ ನೀಡಲಾಗಿದೆ. ಹಿಂದಿನ ವರ್ಷಗಳಲ್ಲಿ ಅಂಥ ಕೃತ್ಯಗಳಲ್ಲಿ ಭಾಗಿಯಾಗಿದ್ದವರನ್ನು ಮುಂಜಾಗ್ರತಾ ಕ್ರಮವಾಗಿ ವಿಚಾರಣೆಗೊಳಪಡಿಸಲು ತಿಳಿಸಲಾಗಿದೆ’ ಎಂದು ಶಶಿಕುಮಾರ್ ತಿಳಿಸಿದರು.

‘ಬೆಟ್ಟಿಂಗ್ ಗೀಳು ಬೆಳೆಸಿಕೊಳ್ಳಬಾರದು, ಹಣ ಕಳೆದುಕೊಳ್ಳಬಾರದು. ಹುಬ್ಬಳ್ಳಿ–ಧಾರವಾಡ ಮೂಲದ ಕೆಲವು ವ್ಯಕ್ತಿಗಳು ಬೇರೆಬೇರೆ ಕಡೆ ಇಂಥ ಜಾಲಗಳಲ್ಲಿ ಭಾಗಿಯಾಗಿರುವ ಮಾಹಿತಿ ಇದೆ. ಈ ಬಗ್ಗೆಯೂ ನಿಗಾ ಇಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.