ಧಾರವಾಡ: ‘ಚೆಸ್ ಆಟವು ಭಾವನಾತ್ಮಕ ಮತ್ತು ವಿವೇಚನಾತ್ಮಕ ಸಮತೋಲನ ಬೆಳೆಸುತ್ತದೆ. ತಾರ್ಕಿಕ ಸಾಮರ್ಥ್ಯವನ್ನು ವೃದ್ಧಿಸುತ್ತದೆ’ ಎಂದು ಎಬಿಎಫ್ ಅಧ್ಯಕ್ಷ ಅಭಿಜಿತ್ ಬೆಂಗೇರಿ ಹೇಳಿದರು.

ಕಾಸ್ಮೊಸ್ ಕ್ಲಬ್ ಆವರಣದಲ್ಲಿ ಭಾನುವಾರ ನಡೆದ ಮುಕ್ತ ರ್ಯಾಪಿಡ್ ಚೆಸ್ ಟೂರ್ನಿ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕ್ರೀಡೆಗಳು ನಮಗೆ ಸೋಲನ್ನು ಎದುರಿಸುವುದನ್ನು ಕಲಿಸುತ್ತವೆ. ಪೋಷಕರು ಮಕ್ಕಳನ್ನು ಕ್ರೀಡೆಗಳಲ್ಲಿ ತೊಡಗಿಸಬೇಕು. ಪ್ರೋತ್ಸಾಹಿಸಬೇಕು. ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಕ್ರೀಡೆಗಳು ಸ್ಪರ್ಧಾಮನೋಭಾನವನ್ನು ಮೈಗೂಡಿಸುತ್ತವೆ’ ಎಂದರು.

ಕಾಸ್ಮೊಸ್ ಕ್ಲಬ್ ಮಾಜಿ ಅಧ್ಯಕ್ಷ ಸಿ.ವಿ.ಮರದ ಮಾತನಾಡಿ, ‘ಮಕ್ಕಳು ಆಟಗಳಲ್ಲಿ ಭಾಗವಹಿಸಬೇಕು. ಸಾಧನೆ ಮಾಡಬೇಕು’ ಎಂದು ಹೇಳಿದರು.

ಕ್ಲಬ್ ಅಧ್ಯಕ್ಷ ನಿತಿನ್ ಟಗರ್ಪುರ್ ಮಾತನಾಡಿ, ‘ಕಾಸ್ಮೊಸ್ ಕ್ಲಬ್ಗೆ ಶತಮಾನದ ಇತಿಹಾಸ ಇದೆ. ಇಲ್ಲಿ ಟೇಬಲ್ ಟೆನಿಸ್ ಸಹಿತ ವಿವಿಧ ಕ್ರೀಡೆಗಳನ್ನು ನಡೆಸಲಾಗುತ್ತಿದೆ. ಕ್ರೀಡೆಗಳಷ್ಟೇ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ’ ಎಂದು ಹೆಳಿದರು.

ಧಾರವಾಡ, ಗದ, ಹಾವೇರಿ, ಬೆಳಗಾಗಿ, ಕೊಪ್ಪಳ, ಬೆಂಗಳೂರು, ಶಿವಮೊಗ್ಗ, ಉತ್ತರ ಕನ್ನಡ ಸಹಿತ ವಿವಿಧ ಜಿಲ್ಲೆಗಳ ಒಟ್ಟು 152 ಆಟಗಾರರು ಭಾಗವಹಿಸಿದ್ದರು. ಕ್ಲಬ್ ಉಪಾಧ್ಯಕ್ಷ ಎಚ್.ಎಫ್.ಹೆಬ್ಬಾಳ, ಕಾರ್ಯದರ್ಶಿ ಅಶೋಕ ಹಿರೇಮಠ, ಕೆ.ವಿ.ಶ್ರೀಪಾದ, ಸಂದೀಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-24-731622824

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.