ಧಾರವಾಡ: ನಗರದ ರಂಗಾಯಣದ ಅಂಗಳದಲ್ಲಿ ಭಾನುವಾರ ನಡೆದ ಮಕ್ಕಳ ಸಂತೆ ಹಾಗೂ ಜಾತ್ರೆಯಲ್ಲಿ ಚಿಣ್ಣರು ವಿವಿಧ ಪದಾರ್ಥಗಳನ್ನು ಮಾರಾಟ ಮಾಡಿ, ತೇರು ಎಳೆದು ಸಂಭ್ರಮಿಸಿದರು.

ರಂಗಾಯಣ ವತಿಯಿಂದ ಆಯೋಜಿಸಿರುವ ಬೇಸಿಗೆ ಶಿಬಿರದಲ್ಲಿ ಸಿದ್ಧಪಡಿಸಿದ ಚಿಣ್ಣರ ತೇರಿಗೆ ಜನಪದ ಗಾಯಕ ಇಮಾಮಸಾಬ್ ವಲ್ಲೆಪ್ಪನವರ ಹಾಗೂ ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಹುಡೇದ ಅವರು ಪೂಜೆ ಸಲ್ಲಿಸಿದರು. ಮಕ್ಕಳು, ಕಲಾವಿದರು ಹಾಗೂ ಸಿಬ್ಬಂದಿ ತೇರು ಎಳೆದು ‘ಹರ ಹರ ಮಹಾದೇವ...’ ಎಂದು ಕೂಗಿ ಚಿಣ್ಣರ ಜಾತ್ರೆಗೆ ಚಾಲನೆ ನೀಡಿದರು.

ಸಂತೆಯಲ್ಲಿ ಶೇಂಗಾ ಉಂಡೆ, ಬಾಳೆ ಹಣ್ಣು, ಪೇರಲ, ಚುರುಮುರಿ, ಮಿರ್ಚಿ–ಗಿರಮಿಟ್, ಮಜ್ಜಿಗೆ ಮೊದಲಾದವುನ್ನು ಮಕ್ಕಳು ಮಾರಾಟ ಮಾಡಿ, ಖರೀದಿಸಿ ಖುಷಿಪಟ್ಟರು. ನಗದು ವ್ಯವಹಾರದ ಜತೆಗೆ ‘ಫೋನ್ ಪೇ’, ‘ಗೂಗಲ್ ಪೇ’ ಅನ್ನೂ ಬಳಸಿದರು.

ಶಿಬಿರದ ಸಂಚಾಲಕ ಅರುಣಕುಮಾರ ಮೇದಾರ, ತರಬೇತುದಾರ ರಾಜ್ ಕವಡೆನವರ, ಸಂಗೀತ ಕಲಾವಿದೆ ಸುನಂದಾ ನಿಂಬನಗೌಡರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-24-1844078076

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.