ಧಾರವಾಡ: ‘ಕಾಂಗ್ರೆಸ್ ಯುವ ಘಟಕದ ಮುಖಂಡ ಫೈರೋಜ್ ಖಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಹು–ಧಾ ಮಹಾನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಆರೋಪಿಗಳನ್ನು ಕೋರ್ಟ್ಗೆ ಹಾಜರುಪಡಿಸಲಾಗಿದೆ. ಕೋರ್ಟ್ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ’ ಎಂದರು.

‘ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆಯಲಾಗುತ್ತಿದೆ. ಆರೋಪಿಗಳನ್ನು ಗುರುತಿಸುವ ನಿಟ್ಟಿನಲ್ಲಿ ‘ಟೆಸ್ಟ್ ಐಡೆಂಟಿಪಿಕೇಷನ್ ಪರೇಡ್‘ ಮಾಡಿಸಲಾಗುವುದು. ಈ ‘ಪರೇಡ್‘ಗೆ ಕೋರ್ಟ್ ಅನುಮತಿ ಕೋರಲಾಗುವುದು’ ಎಂದು ತಿಳಿಸಿದರು.

‘ವೈಯುಕ್ತಿಕ ಸಂಘರ್ಷ ಹತ್ಯೆಗೆ ಕಾರಣ. ಫೈರೋಜ್ ಕಿರಿಕಿರಿ ಮಾಡುತ್ತಿದ್ದ ಎಂದು ಪ್ರಮುಖ ಆರೋಪಿ ವಿಚಾರಣೆಯಲ್ಲಿ ಹೇಳಿದ್ದಾನೆ. ಆರೋಪಿಗಳ ಪೈಕಿ ಕೆಲವರು ಕ್ರಿಮಿನಲ್ ಹಿನ್ನೆಲೆಯವರು ಇದ್ಧಾರೆ. ಇನ್ನು ಕೆಲ ಆರೋಪಿಗಳ ಪತ್ತೆಗಾಗಿ ಶೋಧ ಮುಂದುವರಿದಿದೆ’ ಎಂದರು.

‘ಫೈರೋಜ್ಗೆ ಮದುವೆ ನಿಗದಿಯಾಗಿತ್ತು. ಆತ ಆಮಂತ್ರಣ ಪತ್ರಿಕೆ ಹಂಚುವ ಕಾರ್ಯದಲ್ಲಿ ತೊಡಗಿದ್ದ. ದುಷ್ಕರ್ಮಿಗಳು ಕೆಲ ತಿಂಗಳ ಹಿಂದೆಯೇ ಫೈರೋಜ್ ಹತ್ಯೆಗೆ ಸಂಚು ರೂಪಿಸಿದ್ದಾರೆ. ಹೊಂಚು ಹಾಕಿ ಏ.10ರಂದು ರಾತ್ರಿ ಮನೆಗೆ ನುಗ್ಗಿ ಫೈರೋಜ್ನನ್ನು ಹತ್ಯೆ ಮಾಡಿದ್ದಾರೆ’ ಎಂದು ತಿಳಿಸಿದರು.
.ಅನುಚಿತವಾಗಿ ಸ್ಪರ್ಶಿಸಿದ್ದ ನಿರ್ದೇಶಕ, ಲವ್ ಜಿಹಾದ್ ಆರೋಪ ಸುಳ್ಳು: ಮೊನಾಲಿಸಾ.ರೌಡಿಶೀಟರ್ ಆರಿಫ್ ಕೊಲೆ ಪ್ರಕರಣ: 7 ಪ್ರಮುಖ ಆರೋಪಿಗಳ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.