ಧಾರವಾಡ: ಮನೆ ನಿರ್ಮಿಸಿಕೊಡುವುದಾಗಿ ₹6 ಲಕ್ಷ ಮುಂಗಡ ಹಣ ಪಡೆದು ಕೈಕೊಟ್ಟ ಪ್ರಕರಣದಲ್ಲಿ ವಿಲ್ಲಾಸ್ ಬಿಲ್ಟ್ ಮಾರ್ಟ್ ಬಿಲ್ಡರ್ಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ. ಬಡ್ಡಿಸಮೇತ ಹಣ ವಾಪಸ್ ನೀಡುವಂತೆ ಆದೇಶಿಸಿದೆ.

ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯೆ ವಿಶಾಲಾಕ್ಷಿ ಅ ಬೋಳಶೆಟ್ಟಿ ಅವರು ಆದೇಶ ನೀಡಿದ್ದಾರೆ. ಮುಂಗಡ ಪಾವತಿಸಿದ್ದ ₹6 ಲಕ್ಷಕ್ಕೆ ವಾರ್ಷಿಕ ಶೇ 10 ಬಡ್ಡಿ ಲೆಕ್ಕ ಹಾಕಿ ಮೊತ್ತವನ್ನು ಒಂದು ತಿಂಗಳೊಳಗೆ ಪಾವತಿಸಬೇಕು, ಪರಿಹಾರ ₹50 ಸಾವಿರ, ಪ್ರಕರಣದ ವೆಚ್ಚ ₹10 ಸಾವಿರ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಹುಬ್ಬಳ್ಳಿಯ ನಂದೀಶ ಹೊನ್ನಿಹಳ್ಳಿ ಅವರು ಉಣಕಲ್ನ ನಿವೇಶನದಲ್ಲಿ ಮನೆ ನಿರ್ಮಿಸಲು ನಿರ್ಧರಿಸಿದ್ದರು. ₹41 ಲಕ್ಷ ವೆಚ್ಚದಲ್ಲಿ 7 ತಿಂಗಳೊಳಗೆ ಮನೆ ನಿರ್ಮಿಸಿಕೊಡಬೇಕು ಎಂದು ಬೆಂಗಳೂರಿನ ಸರ್ಜಾಪುರದ ವಿಲಾಸ ಬೋಸಲೆ ಅವರೊಂದಿಗೆ 2023 ಜೂನ್ 1ರಂದು ಒಪ್ಪಂದ ಮಾಡಿಕೊಂಡಿದ್ದರು. ₹6 ಲಕ್ಷ ಮುಂಗಡವಾಗಿ ಪಾವತಿಸಿದ್ದರು.

ಹಲವು ತಿಂಗಳು ಕಳೆದರೂ ಬಿಲ್ಡರ್ ಮನೆ ನಿರ್ಮಾಣ ಕಾಮಗಾರಿ ಆರಂಭಿಸಲಿಲ್ಲ. ನಂದೀಶ ಅವರು ಬಿಲ್ಡರ್ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗಕ್ಕೆ 2024 ಏಪ್ರಿಲ್ 12ರಂದು ದೂರು ಸಲ್ಲಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-19-1016618121

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.