ಧಾರವಾಡ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಮುಸ್ಲಿಮರು ಈದ್-ಉಲ್-ಫಿತ್ರ್ ಅನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.

ಹಬ್ಬದ ಪ್ರಯುಕ್ತ ಬೆಳಕು ಹರಿಯುತ್ತಿದ್ದಂತೆ ಶ್ವೇತ ವರ್ಣದ ಉಡುಪು ಧರಿಸಿ ಮನೆಯಲ್ಲಿ ಕುರಾನ್ ಪಠಣ ಮಾಡಿದರು. ಬಳಿಕ ಬೈಕ್, ಕಾರು ಸೇರಿದಂತೆ ಇತರೆ ವಾಹನಗಳಲ್ಲಿ ಹಿರಿಯರು, ಮಕ್ಕಳು ಚಾಪೆ, ಜಮಖಾನ ಕೈಯಲ್ಲಿ ಹಿಡಿದು ನಗರದ ಈದ್ಗಾ ಮೈದಾನಕ್ಕೆ ಆಗಮಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಪೆಂಡಾರ ಗಲ್ಲಿಯ ಜುಮ್ಮಾ ಮಸೀದಿಯ ಹಫೀಜ್ ಉಮರ್ ಮೊಹಮ್ಮದ್ ರಜಾ ಅವರು ಪ್ರಾರ್ಥನೆ ಬೋಧಿಸಿದರು. ಹಬ್ಬದ ವೈಶಿಷ್ಟ್ಯದ ಕುರಿತು ವಿವರಿಸುವ ಜೊತೆಗೆ, ಜಗತ್ತಿನಲ್ಲಿ ಶಾಂತಿ ಸ್ಥಾಪನೆಗಾಗಿ ಎಲ್ಲರೂ ಪ್ರಾರ್ಥನೆ ಸಲ್ಲಿಸಬೇಕು. ಸಮಾಜದಲ್ಲಿ ಸರ್ವಧರ್ಮೀಯರು ಶಾಂತಿ, ಸಹಬಾಳ್ವೆ ಹಾಗೂ ಎಲ್ಲರೊಂದಿಗೂ ಸಹೋದರತೆಯಿಂದ ಬಾಳುವಂತೆ ಸಂದೇಶ ನೀಡಿದರು.

ಪ್ರಾರ್ಥನೆ ಬಳಿಕ ಪರಸ್ಪರರು ‘ಈದ್– ಮುಬಾರಕ್’ ಎನ್ನುತ್ತಾ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಬಡವರು, ನಿರ್ಗತಿಕರು, ಅಂಗವಿಕಲರಿಗೆ ನಗದು, ವಸ್ತ್ರ ಹಾಗೂ ಮತ್ತಿತರ ಸಾಮಗ್ರಿಗಳನ್ನು ದಾನ ಮಾಡಿದರು.

ಹೊಸ ಉಡುಪು, ಬಗೆಬಗೆಯ ಟೋಪಿಗಳನ್ನು ಧರಿಸಿ ಬಂದಿದ್ದ ಚಿಣ್ಣರು ನೋಡುಗರ ಗಮನ ಸೆಳೆದರು. ಸುಗಂಧ ದ್ರವ್ಯದ ಘಮಲು ಹರಡಿತ್ತು. ಕೆಲವರು ಬಿಸಿಲಿನ ತಾಪ ತಾಳದೇ ಕೊಡೆ ಹಿಡಿದು ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ಅಂಜುಮನ್ ಅಧ್ಯಕ್ಷ ಮೊಹಮ್ಮದ್ ಇಸ್ಮಾಯಿಲ್ ತಮಟಗಾರ, ಉಪಾಧ್ಯಕ್ಷ ಬಸೀರ್ ಅಹ್ಮದ್ ಜಾಗೀರದಾರ, ರಫೀಕ್ ಶಿರಹಟ್ಟಿ, ರಿಯಾಜ್ ಅಹಮ್ಮದ ನನ್ನೆಸಾಬನವರ, ಮಹ್ಮದ ಗೌಸ ಮಕಾಂದಾರ, ಬಸೀರ್ ಅಹಮ್ಮದ ಹಾಳಭಾವಿ, ಯಾಸೀನ, ಪಾಲ್ಗೊಂಡಿದ್ದರು.

ಶಿರ್ಕುರ್ಮಾ, ಬಿರಿಯಾನಿ, ಮಾಂಸದ ವಿವಿಧ ಖಾದ್ಯಗಳು, ತಿಂಡಿ ಹಾಗೂ ಪಾನಕಗಳನ್ನು ಮನೆಯಲ್ಲೇ ತಯಾರಿಸಿ ಕುಟುಂಬ ಸಮೇತರಾಗಿ ಸವಿದರು. ಹಿಂದೂಗಳೂ ಭೋಜನಕೂಟದಲ್ಲಿ ಪಾಲ್ಗೊಂಡು ಶುಭಾಶಯ ಕೋರಿದರು. ಈದ್ಗಾ ಮೈದಾನ ಸುತ್ತಲು ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-24-1305264109

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.