ಉಪ್ಪಿನಬೆಟಗೇರಿ: ‘ರೈತರು ಒಗ್ಗಟ್ಟಾಗಬೇಕೆಂಬ ಉದ್ದೇಶದಿಂದ ತಳಮಟ್ಟದಲ್ಲಿ ರೈತ ಸಂಘವನ್ನು ಬಲಪಡಿಸಲಾಗುತ್ತಿದೆ’ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಫಾರುಕ್ ಕಿಲ್ಲೇದಾರ ಹೇಳಿದರು.

ಧಾರವಾಡ ತಾಲ್ಲೂಕಿನ ಹಾರೋಬೆಳವಡಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಸಭಾಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಕೋಡಿಹಳ್ಳಿ ಚಂದ್ರಶೇಖರ ಬಣ) ಧಾರವಾಡ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಘಟಕ ಸೋಮವಾರ ಏರ್ಪಡಿಸಿದ್ದ ಹಾರೋಬೆಳವಡಿ ಘಟಕ ರೈತ ಸಂಘ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಾರೋಬೆಳವಡಿ ಗ್ರಾಮ ಘಟಕದ ಉಪಾಧ್ಯಕ್ಷ ನಾಮದೇವ ಪಟದಾರಿ ಮಾತನಾಡಿ, ‘ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ತಡವಾಗಿ ತೆರೆಯಲಾಗುತ್ತಿದೆ. ಕಾಳು ಮಾರಾಟ ಮಾಡಿದ ರೈತರಿಗೆ ತಡವಾಗಿ ಹಣ ಸಂದಾಯವಾಗುವುದು ಸೇರಿದಂತೆ ಹಲವು ತೊಂದರೆ ಅನುಭವಿಸುತ್ತಿದ್ದಾರೆ.ಅಂಥವರ ಬೆನ್ನೆಲುಬಾಗಿ ಸಂಘಟನೆ ನಿಲ್ಲಲಿದೆ’ ಎಂದು ಹೇಳಿದರು.

ರೈತ ಸಂಘದ ಹಿರಿಯ ಸದಸ್ಯ ರಾಮಣ್ಣ ಜಕ್ಕಣ್ಣವರ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಮಾರುತಿ ಸುಂಕದ, ತಾಲ್ಲೂಕು ಘಟಕದ ಬಸವಂತ ಶಿಗೀಹಳ್ಳಿ, ನಿಂಗಪ್ಪ, ಅಶೋಕ ಬಡಿಗೇರ, ಹಾರೋಬೆಳವಡಿ ಗ್ರಾಮ ಘಟಕದ ಅಧ್ಯಕ್ಷ ಶಿವಾನಂದ ಪುಂಡಪ್ಪನವರ, ಬಸವರಾಜ ಅಂಗಡಿ, ಬಸಪ್ಪ ಕನಾಜಿ, ಬಸನಗೌಡ ಹಳಮನಿ, ರುದ್ರಗೌಡ ಹಳಮನಿ, ನವೀನ ಕನಾಜಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-24-192311553

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.