ಧಾರವಾಡ: ‘ಕಳಪೆ ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ಮಾಡುವುದು, ದಾಸ್ತಾನು –ದರ ಫಲಕ ಅಳವಡಿಸದಿರುವುದು, ಅಕ್ರಮ ದಾಸ್ತಾನು, ಕೃತಕ ಅಭಾವ ಸೃಷ್ಟಿ, ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ, ಖರೀದಿ ರಸೀದಿ ನೀಡಿದಿರುವುದು, ‘ಲಿಂಕ್’ ಗೊಬ್ಬರ ನೀಡುವುದು ಕಂಡುಬಂದರೆ ಅಂಥ ಅಂಗಡಿಯ ಮಾರಾಟ ಪರವಾನಗಿ ಅಮಾನತು ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಸ್ನೇಹಲ್ ತಿಳಿಸಿದರು.

ರೈತ ಮುಖಂಡರು, ಕೃಷಿ ಅಧಿಕಾರಿಗಳು, ರಸ ಗೊಬ್ಬರ ಮಾರಾಟಗಾರರು ಜತೆ ಶುಕ್ರವಾರ ‘ಗೂಗಲ್ ಮೀಟ್’ ಮೂಲಕ ಮಾತನಾಡಿದರು.

ಮುಂಗಾರು ಹಂಗಾಮಿನ ಬಿತ್ತನೆ ಚಟುವಟಿಕೆಗಳು ಜೂನ್ನಲ್ಲಿ ಆರಂಭವಾಗಲಿವೆ. ಬಿತ್ತನೆ, ಬೀಜ, ರಸಗೊಬ್ಬರ ದಾಸ್ತಾನು ಇದೆ. ರೈತರಿಗೆ ವಿತರಣೆಗೆ ಕೃಷಿ ಅಧಿಕಾರಿಗಳು ಕ್ರಮ ವಹಿಸಬೇಕು. ಬಿತ್ತನೆ ಬೀಜ, ರಸಗೊಬ್ಬರ ಬಗ್ಗೆ ರೈತರು ದೂರು ನೀಡಿದರೆ ವಿಚಕ್ಷಣ ದಳದವರು ಪರಿಶೀಲಿಸಿ ನಿಗಾ ವಹಿಸಬೇಕು ಎಂದರು.

‘ಫ್ರೂಟ್ ಗುರುತಿನ ಸಂಖ್ಯೆ ಇರುವ ರೈತರಿಗೆ ಯೂರಿಯಾ ಗೊಬ್ಬರ ವಿತರಣೆ ಮಾಡಬೇಕು. ಎಕರೆಗೆ ಒಂದು ಚೀಲ ವಿತರಿಸಬೇಕು. ಈ ಸೂಚನೆಯನ್ನು ರಸಗೊಬ್ಬರ ಮಾರಾಟ ಕೇಂದ್ರಗಳವರು ಪಾಲಿಸಬೇಕು. ಫ್ರೂಟ್ ಐಡಿ ಇರುವವರಿಗೆ ಕೆ-ಕಿಸಾನ್ ತಂತ್ರಾಂಶದ ಮೂಲಕ ಯೂರಿಯಾ ರಸಗೊಬ್ಬರವನ್ನು ವಿತರಿಸಿ ಪಿಒಎಸ್ (ಪಾಯಿಂಟ್ ಆಫ್ ಸೇಲ್) ಯಂತ್ರದಲ್ಲಿ ದಾಖಲಿಸಬೇಕು’ ಎಂದರು.

‘ಮುಂಗಾರು ಹಂಗಾಮಿಗೆ ಯೂರಿಯಾ ರಸಗೊಬ್ಬರ 27,642 ಮೆಟ್ರಿಕ್ ಟನ್ ಬೇಡಿಕೆ ಅಂದಾಜಿಸಲಾಗಿದೆ. ಏಪ್ರಿಲ್ವರೆಗೆ 9,718 ಮೆಟ್ರಿಕ್ ಟನ್ ದಾಸ್ತಾನು ಇತ್ತು. ಏಪ್ರಿಲ್ನಿಂದ ಮೇ 21ರವರೆಗೆ 3,106 ಮೆಟ್ರಿಕ್ ಟನ್ ಮಾರಾಟವಾಗಿದೆ. ಗೋದಾಮು, ಮಾರಾಟ ಕೇಂದ್ರಗಳಲ್ಲಿ 6,612 ಮೆಟ್ರಿಕ್ ಟನ್ ದಾಸ್ತಾನು ಇದೆ. ಡಿಎಪಿ 4,526, ಪೊಟ್ಯಾಷ್ 2,562, ಕಾಂಪ್ಲೆಕ್ಸ್ 11,299, ಎಸ್ಎಸ್ಪಿ 453 ಮೆಟ್ರಿಕ್ ಟನ್ ದಾಸ್ತಾನು ಇದೆ. ಒಟ್ಟಾರೆ ಯೂರಿಯಾ ಸಹಿತ 24,793 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ. 288 ಮಾರಾಟ ಕೇಂದ್ರಗಳಿದ್ದು, ಈ ಕೇಂದ್ರಗಳ ಮೂಲಕ ರಸಗೊಬ್ಬರ ವಿತರಿಸಲಾಗುವುದು’ ಎಂದರು.

‘ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಸೋಯಾ ಅವರೆ 2,764, ಶೇಂಗಾ 240, ಉದ್ದು 133 ಕ್ವಿಂಟಲ್ ದಾಸ್ತಾನು ಇದೆ. 31 ಕೇಂದ್ರಗಳಲ್ಲಿ ಬಿತ್ತನೆ ಬೀಜ ಮಾರಾಟ ನಡೆಯಲಿದೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-24-915605572

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.