ಧಾರವಾಡ: ನಗರದ ಹೊರವಲಯದ ತಡಸಿನಕೊಪ್ಪ ಬಳಿ ನಡೆದ ಫೈರಿಂಗ್ ಪ್ರಕರಣದಲ್ಲಿ ರಿಯಲ್ ಎಸ್ಟೇಟ್ ಡೆವಲಪರ್ ಪ್ರವೀಣ ಸುತಾರ, ಫಿಲೋಮಿನಾ ಫೌಲ್, ಇಂದ್ರಪಾಲ್ ಸಿಂಗ್, ಬೆಂಜಮಿನ್ ಗೋಟೆಮಕ್ಕಲ್ ಮತ್ತು ವಿಶಾಲ್ ಜಾಧವ್ ಅವರನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಐದು ತಂಡಗಳನ್ನು ರಚಿಸಲಾಗಿದೆ ಎಂದು ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ರಿವಾಲ್ವರ್, ಪಿಸ್ತೂಲು ಮತ್ತು ಕಾರು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ’ ಎಂದು ತಿಳಿಸಿದರು.

‘ತಡಸಿನಕೊಪ್ಪ ಬಳಿ (ಐಐಐಟಿ ಸಮೀಪ) ಜಮೀನು (ಸರ್ವೆ ನಂಬರ್ 53/8) ವಿಚಾರದಲ್ಲಿ ಮೇ 26ರಂದು ವ್ಯಾಜ್ಯ ನಡೆದಿದೆ. ಆ ಜಮೀನು ಖರೀದಿಸಿರುವುದಾಗಿ ಹೇಳಿದವರು ಮತ್ತು ಸುಪರ್ದಿಯಲ್ಲಿರುವವರ ನಡುವೆ ಸಂಘರ್ಷವಾಗಿ ವಿಠ್ಠಲ ವಾಲಿಕಾರ (ಸುಪರ್ದಿ) ಅವರ ಕಾಲಿಗೆ ಗುಂಡು ತಗುಲಿ ಗಾಯವಾಗಿದೆ’ ಎಂದು ತಿಳಿಸಿದರು.

‘ಅಂಗ ರಕ್ಷಕರು ಗುಂಡು ಹಾರಿಸಿದರು ಎಂದು ದೂರುದಾರರು ಹೇಳಿದ್ದರು. ಸಾಕ್ಷ್ಯ ಸಂಗ್ರಹ ಸಂದರ್ಭದಲ್ಲಿ ಕಲೆ ಹಾಕಿದ ವಿಡಿಯೊಗಳನ್ನು ಪರಿಶೀಲಿಸಿದಾಗ ಪ್ರವೀಣ ಸುತಾರ ಮತ್ತು ಸುಂದರ ಪೌಲ್ ಅವರು ಗುಂಡು ಹಾರಿಸಿರುವುದು ಕಂಡುಬಂದಿದೆ. ಅಂಗರಕ್ಷಕ ಇಂದ್ರಪಾಲ್ನಿಂದ ಪಿಸ್ತೂಲ ಕಿತ್ತುಕೊಂಡು ಸುಂದರ ಪೌಲ್ (ಫಿಲೋಮಿನಾ ಫೌಲ್ ಪುತ್ರ) ಗುಂಡು ಹಾರಿಸಿರುವುದು ಕಂಡುಬಂದಿದೆ. ಫಿಲೊಮಿನ್ ಪೌಲ್ ಫೋನ್ನಲ್ಲಿ ಮಾತಾಡಿರುವುದು, ಈ ಹಿಂದೆ ಕೆಲವೊಮ್ಮೆ ಆ ಜಮೀನು ಸ್ಥಳಕ್ಕೆ ಹೋಗಿ ಬೆದರಿಕೆ ಹಾಕಿರುವುದು ವಿಚಾರಣೆಯಲ್ಲಿ ಗೊತ್ತಾಗಿದೆ’ ಎಂದರು.

ವಿಠ್ಠಲ ವಾಲಿಕಾರ ಸಹೋದರ ಬಸವರಾಜ ವಾಲಿಕಾರ ದೂರು ನೀಡಿದ್ದಾರೆ. ವಿದ್ಯಾಗಿರಿ ಠಾಣೆಯಲ್ಲಿ ಕೊಲೆ ಯತ್ನ, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-24-1035216056

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.