ಧಾರವಾಡ: ಹಲವು ವರ್ಷಗಳ ಹಿಂದೆ ಕಲಘಟಗಿಯ ಹರ್ಷ ಎಂಟರ್ ಟೇನ್ಮೆಂಟ್ ಪ್ರೈವೇಟ್ ಲಿಮಿಟೆಡ್ನಲ್ಲಿ ಹಣ ತೊಡಗಿಸಿ ವಂಚನೆಗೆ ಒಳಾಗಿರುವವರು ಜಿಲ್ಲಾಧಿಕಾರಿ ಕಚೇರಿಯ ಕೊಠಡಿಯಲ್ಲಿ ಸೋಮವಾರ ಕ್ಲೇಮು ಅರ್ಜಿಗಳನ್ನು ಸಲ್ಲಿಸಿದರು.

ವಿವಿಧೆಡೆಗಳಿಂದ ಬಂದಿದ್ದ ನೂರಾರು ಮಂದಿ, ಸರದಿಯಲ್ಲಿ ನಿಂತು ಸುಡುಬಿಸಿಲೂ ಲೆಕ್ಕಿಸದೆ ದಾಖಲೆ ಸಮೇತ ಅರ್ಜಿ ಸಲ್ಲಿಸಿದರು.

ವೃದ್ಧರು, ಪೊಲೀಸರು, ಶಿಕ್ಷಕರು, ನಿವೃತ್ತ ನೌಕರರು, ಮಹಿಳೆಯರು ಇದ್ದರು. ಹಣ ಕೊಡಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು. ಅರ್ಜಿಗಳನ್ನು ಸಲ್ಲಿಸಲು ಮೇ 26ರವರೆಗೆ ಅವಕಾಶ ಇದೆ.

‘ಹರ್ಷ ಎಂಟರ್ಟೇನ್ಮೆಂಟ್ ಪ್ರೈವೇಟ್ ಲಿಮಿಟೆಡ್ನವರು ಮಾಸಿಕ ಶೇ 6 ಬಡ್ಡಿ ನೀಡುವುದಾಗಿ ನಂಬಿಸಿ ₹13 ಲಕ್ಷ ಠೇವಣಿಯನ್ನು 2016ರಲ್ಲಿ ಇರಿಸಿಕೊಂಡಿದ್ದರು. ನಂತರ, ಠೇವಣಿ ಹಣ, ಬಡ್ಡಿ ಯಾವುದನ್ನೂ ಕೊಡದೆ ಮೋಸ ಮಾಡಿದ್ದಾರೆ. ಈ ಸಂಸ್ಥೆಯಲ್ಲಿ ಹಣ ತೊಡಗಿಸಿ ಬಹಳಷ್ಟು ಜನರು ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ’ ಎಂದು ನಿವೃತ್ತ ಶಿಕ್ಷಕ ಮಾದಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೆಚ್ಚು ಬಡ್ಡಿ ನೀಡುತ್ತಾರೆ ಎಂದು ಹರ್ಷ ಎಂಟರ್ಟೇನ್ಮೆಂಟ್ ಪ್ರೈವೇಟ್ ಲಿಮಿಟೆಡ್ನಲ್ಲಿ 2016ರಲ್ಲಿ ₹3 ಲಕ್ಷ ಠೇವಣಿ ಇಟ್ಟಿದ್ದೆ. ಹಣ ಕೊಡದೆ ಮೋಸ ಮಾಡಿದ್ದಾರೆ’ ಎಂದು ಗಂಗವ್ವ ತಿಳಿಸಿದರು.

‘ಹರ್ಷ ಸಂಸ್ಥೆಯವರು ಮೊದಲು ಕೆಲವರಿಗೆ ಠೇವಣಿ ಹಣಕ್ಕೆ ಶೇ 5 ಬಡ್ಡಿ ನೀಡಿ ನಂಬಿಸಿದರು. ನಂತರ, ಬಹಳಷ್ಟು ಜನರು ಇಟ್ಟರು. ನಾವು ₹20 ಲಕ್ಷ ಹಣ ಇಟ್ಟಿದ್ದೆವು. ಮೋಸ ಹೋದೆವು’ ಎಂದು ನಿವೃತ್ತ ಉಪನ್ಯಾಸಕರೊಬ್ಬರು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-24-913807564

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.