ಧಾರವಾಡ: ಇಲ್ಲಿನ ಹಾವೇರಿಪೇಟೆಯ ಗ್ರಾಮದೇವಿಯರ ಜಾತ್ರಾ ಮಹೋತ್ಸದ ಪ್ರಯುಕ್ತ ಭಾನುವಾರ ದ್ಯಾಮವ್ವ-ದುರ್ಗವ್ವ ದೇವಿ ಮೂರ್ತಿಯ ಭವ್ಯ ಮೆರವಣಿಗೆ ಹಾಗೂ ಹೊನ್ನಾಟ ಸಂಭ್ರಮದಿಂದ ಜರುಗಿತು.

ಬೆಳಿಗ್ಗೆ 8.30ಕ್ಕೆ ದೇವಿಯರ ಮೂರ್ತಿಗೆ ವಿವಿಧ ಪೂಜಾ ಕಾರ್ಯ ನೆರವೇರಿಸಿ ದೇವಸ್ಥಾನದ ಚೌಕಿ ಮನೆಯಿಂದ ಡೊಳ್ಳಿನ ಮೇಳ ಹಾಗೂ ಉಭಯ ದೇವತೆಯರ ಮೂರ್ತಿಗಳ ಮೆರವಣಿಗೆಯೊಂದಿಗೆ ಹೊನ್ನಾಟ ಆರಂಭಿಸಲಾಯಿತು.

ಹಾವೇರಿಪೇಟೆಯ ಹಲವು ಬಡಾವಣೆಗಳು ಭಂಡಾರಮಯವಾಗಿತ್ತು. ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಹೊನ್ನಾಟ ಸಂಭ್ರಮ ಜೋರಾಗಿತ್ತು. ದೇವಿಯರ ಮೂರ್ತಿ ಪ್ರತಿಷ್ಠಾಪಿಸಿದ್ದ ಅಡ್ಡೆ ಹೊತ್ತು ಭಕ್ತರು ಹಾವೇರಿಪೇಟೆ, ಮೃತ್ಯುಂಜಯ ನಗರ, ರಾಜನಗರ ಮೌರ್ಯ ಪ್ಲಾಟ್, ಶಿವಳ್ಳಿ ಪ್ಲಾಟ್, ಮಟ್ಟಿ ಫ್ಲಾಟ್, ಪತ್ತೆಶ್ವರ ನಗರ, ಕಮತಿ ಪ್ಲಾಟ್, ಮಹಾಂತನಗರ, ವೇದರ ಓಣಿ, ರೇಣುಕಾ ನಗರ, ಕೌಲಗೇರಿ ವೃತ್ತ ವಿವಿಧ ಬಡವಾಣೆಗಳಲ್ಲಿ ಸಾಗಿದರು.

ಓಣಿಗಳ ಜನರು ದೇವಿಗೆ ಆರತಿ ಎತ್ತಿ, ಭಕ್ತಿ ಸಮರ್ಪಿಸಿದರು. ಭಕ್ತರು ಉಧೋ.. ಉಧೋ.. ದ್ಯಾಮವ್ವ ದುರ್ಗವ್ವ ಎಂಬ ಜಯಘೋಷ ಮೊಳಗಿಸಿದರು. ಸಂಜೆ ಮೂಲ ಸ್ಥಳಕ್ಕೆ ಆಗಮಿಸಿ ದೇವಿಯರ ಮೂರ್ತಿಯನ್ನು ತಂದು ಹೊನ್ನಾಟ ಸಂಪನ್ನಗೊಳಿಸಲಾಯಿತು.

ಮಕ್ಕಳು, ಮಹಿಳೆಯರು, ಯುವಕರು, ವೃದ್ಧರು ಹೂವಿನ ಮಳೆ, ಭಂಡಾರ ಎರುಚುತ್ತ ಸಂಭ್ರದಿಂದ ಪಾಲ್ಗೊಂಡಿದ್ದರು. ದೇವಸ್ಥಾನ ಹಾಗೂ ವಿವಿಧ ಬೀದಿಗಳನ್ನು ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.

ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಕೆ.ಎಸ್.ಭೀಮಣ್ಣವರ, ಕಾರ್ಯದರ್ಶಿ ವಿಜಯ ಬೋಸ್ಲೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-24-1848725626

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.