ಧಾರವಾಡ: ದಿನೇದಿನೇ ಬಿಸಿಲಿನ ಧಗೆ, ತಾಪಮಾನ ಹೆಚ್ಚುತ್ತಿದೆ. ಬಾಯಾರಿಕೆ ದಾಹ ತಣಿಸಿಕೊಳ್ಳಲು ಎಳನೀರು, ಕಬ್ಬಿನ ರಸ, ಮಜ್ಜಿಗೆ, ತಂಪು ಪಾನೀಯ, ಕಲ್ಲಂಗಡಿ ಮೊದಲಾದವುಗಳಿಗೆ ಮೊರೆ ಹೋಗುವವರು ಹೆಚ್ಚಾಗಿದ್ದಾರೆ.

ಏಪ್ರಿಲ್ ತಾಪ ಮತ್ತಷ್ಟು ಏರಿಯಾಗಿದೆ. ಈಗಾಗಲೇ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಮೀರಿದೆ. ಮಧ್ಯಾಹ್ನ ಬಿಸಿಲಿನ ಪ್ರಖರತೆ ಹೆಚ್ಚು ಇರುತ್ತದೆ. ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಾಗಿದೆ.

ಎಳನೀರು, ಕಲ್ಲಂಗಡಿ, ಕಬ್ಬಿನ ರಸ ಮೊದಲಾದ ತಂಪು ಪದಾರ್ಥಗಳ ಮಾರಾಟ ಹೆಚ್ಚಾಗಿದೆ. ಎಲ್ಐಸಿ ಕಚೇರಿ ಮುಂಭಾಗ, ಕೆಸಿಡಿ ವೃತ್ತ, ಸಪ್ತಾಪುರ, ಜುಬಿಲಿ ವೃತ್ತ, ಕೋರ್ಟ್ ವೃತ್ತ, ಸಿಬಿಟಿ, ಹೊಸ ಬಸ್ ನಿಲ್ದಾಣ, ದಾಸನಕೊಪ್ಪ ವೃತ್ತ, ಪಿ.ಬಿ ರಸ್ತೆಯ ವಿವಿಧೆಡೆ ವ್ಯಾಪಾರಿಗಳು ಎಳನೀರು, ಕಲ್ಲಂಗಡಿ, ತಂಪು ಪಾನೀಯ ಮಾರಾಟ ಮಾಡುತ್ತಾರೆ.

ಎಳನೀರು ಹಾಗೂ ಕಲ್ಲಂಗಡಿಗೆ ಬೇಡಿಕೆ ಹೆಚ್ಚಿದ್ದು, ಬೆಲೆಯೂ ಸ್ವಲ್ಪ ಏರಿಕೆಯಾಗಿದೆ. ಕಳೆದ ತಿಂಗಳು ಒಂದು ಎಳನೀರಿಗೆ ₹ 30 ರಿಂದ ₹ 35 ಇತ್ತು, ಈಗ ₹ 40 ರಿಂದ ₹ 50ಕ್ಕೆ ಏರಿದೆ. ಕಲ್ಲಂಗಡಿ ದರ ಕೆ.ಜಿ ₹ 30 ಇದೆ.

ಮಧ್ಯಾಹ್ನ ಸುಡು ಬಿಸಿಲಿನಿಂದ ರಕ್ಷಣೆ ನಿಟ್ಟಿನಲ್ಲಿ ಹಲವು ಮಹಿಳೆಯರು, ವೃದ್ಧರು ಛತ್ರಿ ಆಶ್ರಯದಲ್ಲಿ ಓಡಾಡುತ್ತಾರೆ. ಈಜಾಡಲು ಈಜುಕೊಳ, ಕೆರೆ, ಬಾವಿಗಳಲ್ಲಿ ಬರುವವರ ಸಂಖ್ಯೆಯೂ ಹೆಚ್ಚಾಗಿದೆ.

‘10 ವರ್ಷಗಳಿಂದ ಎಳನೀರು ವ್ಯಾಪಾರ ಮಾಡುತ್ತಿದ್ದೇನೆ. ಮಂಡ್ಯ, ಮದ್ದೂರಿನಿಂದ ಎಳನೀರು ತರಿಸುತ್ತೇವೆ. ಮಾರ್ಚ್, ಏಪ್ರಿಲ್ನಲ್ಲಿ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಮಧ್ಯಾಹ್ನದ ಹೊತ್ತಿನಲ್ಲಿ ಗ್ರಾಹಕರು ಹೆಚ್ಚು ಇರುತ್ತಾರೆ’ ಎಂದು ವ್ಯಾಪಾರಿ ಸಂಗಮೇಶ ‘ಪ್ರಜಾವಾಣಿ’ಗೆ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-24-908738655

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.