ಉಪ್ಪಿನಬೆಟಗೇರಿ: ’ಮಕ್ಕಳು ಬೌದ್ಧಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಬೇಸಿಗೆ ಬೆಸುಗೆ ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಮಾದನಬಾವಿ ಹೇಳಿದರು.

ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ಮಾಹಿತಿ ಮತ್ತು ಅರಿವು ಕೇಂದ್ರದಲ್ಲಿ ಜಿಲ್ಲಾ ಪಂಚಾಯಿತಿ ಇವರ ಮಾರ್ಗದರ್ಶನದಲ್ಲಿ ಈಚೆಗೆ ಆರಂಭವಾದ ‘ಬೇಸಿಗೆ ಬೆಸುಗೆ’ ಶಿಬಿರಕ್ಕೆ ಚಾಲನೆ ನೀಡಿ, ಮಾತನಾಡಿದರು.

ಅರಿವು ಕೇಂದ್ರದ ಗ್ರಂಥಪಾಲಕ ಫಕ್ಕೀರಪ್ಪ ಸುಳ್ಳದ ಮಾತನಾಡಿ, ಬೇಸಿಗೆ ಬೆಸುಗೆ ಮೇ ಅಂತ್ಯದವರೆಗೆ ಅರಿವು ಕೇಂದ್ರದಲ್ಲಿ ನಡೆಯಲಿದೆ. ಈಗಾಗಲೆ 45ಕ್ಕೂ ಅಧಿಕ ಮಕ್ಕಳು ನೊಂದನಿ ಮಾಡಿಸಿದ್ದಾರೆ. ಶಿಬಿರದಲ್ಲಿ ಸಂಗೀತ ಸ್ಪರ್ಧೆ, ಬುಗರಿ ಆಟ, ಚಿತ್ರಕಲೆ, ಆಶು ಭಾಷಣ ಸ್ಪರ್ಧೆ ಸೇರಿ ಪ್ರಸ್ತುತ 20ಕ್ಕೂ ಅಧಿಕ ವಿವಿಧ ಬಗೆಯ ಚಟುವಟಿಕೆ ಮಾಡಿಸಲಾಗುತ್ತದೆ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-24-1366999229

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.