ಧಾರವಾಡ: ನಗರದ ಸಪ್ತಾಪುರದ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ನಲ್ಲಿ (ದೀನದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿನಿಲಯ) ಸೌಲಭ್ಯಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುವಂತಾಗಿದೆ.

ಸಮಾಜ ಕಲ್ಯಾಣ ಇಲಾಖೆಯ ಈ ಹಾಸ್ಟೆಲ್ನಲ್ಲಿ ಬಿ.ಇಡಿ, ಎಲ್ಎಲ್ಬಿ, ಎಂ.ಎ ಸಹಿತ ವಿವಿಧ ಪದವಿ ಕೋರ್ಸ್ಗಳ ವಿದ್ಯಾರ್ಥಿಗಳು ಇದ್ದಾರೆ. ಕಟ್ಟಡದಲ್ಲಿ ಕೆಲವು ಮೂಲಸೌಕರ್ಯಗಳೂ ಇಲ್ಲ. ಕೆಲವು ಕೊಠಡಿಗಳಲ್ಲಿ ತಲಾ ನಾಲ್ವರು, ಇನ್ನು ಕೆಲವು ಕೊಠಡಿಗಳಲ್ಲಿ ತಲಾ ಐವರು ವಿದ್ಯಾರ್ಥಿಗಳು ಇದ್ದಾರೆ.

ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಪುಸ್ತಕ, ಲೇಖನ ಸಾಮಗ್ರಿ, ಬಟ್ಟೆ ಇತ್ಯಾದಿಗಳನ್ನು ಇಡಲು ಕಪಾಟುಗಳು ಇಲ್ಲ. ಬಟ್ಟೆ ತೊಳೆಯಲು ಕಲ್ಲಿನ ಕಟ್ಟೆಗಳನ್ನು ನಿರ್ಮಿಸಿಲ್ಲ. ಸ್ನಾನಗೃಹ, ಅಲ್ಲಿನ ನೆಲಹಾಸಿನಲ್ಲೇ ಬಟ್ಟೆ ತೊಳೆಯಬೇಕಾದ ಸ್ಥಿತಿ ಇದೆ.

‘ಹಾಸ್ಟೆಲ್ ಕೊಠಡಿಯಲ್ಲಿ ಸೌಲಭ್ಯಗಳು ಇಲ್ಲ. ಸ್ನಾನಗೃಹದಲ್ಲಿ ಬಿಸಿ ನೀರಿನ ವ್ಯವಸ್ಥೆ ಇಲ್ಲ. ಊಟ, ಉಪಾಹಾರಕ್ಕೆ ಪಕ್ಕದ ಹಾಸ್ಟೆಲ್ಗೆ ಹೋಗಬೇಕು. ಸೊಳ್ಳೆ ಕಾಟ ಇದೆ. ಸಮಸ್ಯೆಗಳ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಸಚಿವ, ಇಲಾಖೆ ಪ್ರಧಾನ ಕಾರ್ಯದರ್ಶಿ, ಜಂಟಿ ನಿರ್ದೇಶಕರಿಗೆ ದೂರು ನೀಡಿದ್ದೇವೆ. ಈವರೆಗೆ ಕ್ರಮ ವಹಿಸಿಲ್ಲ’ ಎಂದು ಎಲ್ಎಲ್ಬಿ ವಿದ್ಯಾರ್ಥಿ ಶಶಿಧರ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ನಾನಗೃಹ ಭಾಗದಲ್ಲಿ ಕೆಲವು ಕಿಟಕಿಗ ಅಳವಡಿಸಿರುವ ಗಾಜುಗಳು ಹಾಳಾಗಿವೆ. ಮೇಜು, ಕುರ್ಚಿ, ಮಂಚ, ದಿಂಬು, ಬೆಡ್ಶೀಟು, ಹಾಸಿಗೆ ಇದ್ಯಾವುದನ್ನೂ ಒದಗಿಸಿಲ್ಲ. ವಿದ್ಯಾರ್ಥಿಗಳು ನೆಲಹಾಸಿನಲ್ಲೇ ಕುಳಿತು ಅಧ್ಯಯನ ಮಾಡಬೇಕಾದ ಸ್ಥಿತಿ ಇದೆ.

ಕಟ್ಟಡದಲ್ಲಿ ಭೋಜನಾಲಯ ಕೊಠಡಿ ಇದೆ. ಆದರೆ, ಅಡುಗೆ ತಯಾರಿ ಇನ್ನು ಆರಂಭಿಸದಿರುವುದರಿಂದ ಊಟ, ಉಪಹಾರಕ್ಕೆ ಪಕ್ಕದ ಹಳೇ ಹಾಸ್ಟೆಲ್ಗೆ ಹೋಗಿಬರಬೇಕು.

‘ಹೊಸ ಕಟ್ಟಡದಲ್ಲಿ ಸುಮಾರು 150 ವಿದ್ಯಾರ್ಥಿಗಳಿಗೆ ಕೊಠಡಿ ಒದಗಿಸಲಾಗಿದೆ. ಹಾಸ್ಟೆಲ್ನಲ್ಲಿ ಹಲವು ಸೌಲಭ್ಯಗಳ ಕೊರತೆ ಇದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಲಾಗಿದೆ. ಜೂನ್ನಿಂದ ಅಲ್ಲಿಯೇ ಅಡುಗೆ ತಯಾರಿಸಲಾಗುವುದು’ ಎಂದು ಹಾಸ್ಟೆಲ್ ವಾರ್ಡನ್ ಅಸ್ಗರ್ ಅಲಿ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-24-1840255236

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.