ಧಾರವಾಡ: ‘ಹುಬ್ಬಳ್ಳಿ–ಧಾರವಾಡ ಪಾಲಿಕೆಯು ರಾಜ್ಯದ ಎರಡನೇ ಅತಿದೊಡ್ಡ ಪಾಲಿಕೆ. ಮೈಸೂರು ಮಹಾನಗರ ಪಾಲಿಕೆಗೆ ಎರಡನೇ ಸ್ಥಾನ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಂತ್ರ ಮಾಡಿ, ಹುಬ್ಬಳ್ಳಿ–ಧಾರವಾಡ ಪಾಲಿಕೆ ವಿಭಜನೆಗೆ ಪ್ರಯತ್ನಿಸಿದರು’ ಎಂದು ಪಾಲಿಕೆ ಸಭಾ ನಾಯಕ ಈರೇಶ ಅಂಚಟಗೇರಿ ಆರೋಪಿಸಿದರು.

‘ಪಾಲಿಕೆಯಲ್ಲಿ ಏಪ್ರಿಲ್ 30 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚಿಸದಿರಲು ಠರಾವು ಆಗಿದೆ. ಬೃಹತ್ ಮಹಾನಗರ ಪಾಲಿಕೆಯಾಗಿಸುವುದು ನಮ್ಮ ಆಶಯ. ಇದಕ್ಕೆ ಪೂರಕವಾಗಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಮತ್ತು ಪ್ರದೀಪ ಶೆಟ್ಟರ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚಿಸಲು ರಾಜ್ಯ ಸರ್ಕಾರ ಬಯಸಿತ್ತು. ಆದರೆ, ಸಮಾನಾಂತರ ವಿಂಗಡಣೆಯಾಗದ ಮತ್ತು ಪಾಲಿಕೆಯ ಹಾಲಿ ಸದಸ್ಯರ ಅವಧಿ ಇನ್ನೂ ಪೂರ್ಣವಾಗದ ಕಾರಣ ನಾವು ಒಪ್ಪಲಿಲ್ಲ. ಇದರ ಬಗ್ಗೆ ಠರಾವು ಮಾಡಿ, ನಿರ್ಣಯ ಕೈಬಿಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು’ ಎಂದರು.

‘ಪಾಲಿಕೆ ವಿಭಜಿಸಿದರೆ ಮುಮ್ಮಿಗಟ್ಟಿ, ಬೇಲೂರು, ನರೇಂದ್ರ ಚಿಕ್ಕಮಲ್ಲಿಗವಾಡ,ಹಿರೇಮಲ್ಲಿಗವಾಡ ಗ್ರಾಮಗಳ ಜನ ಅತಂತ್ರ ಆಗುವರು. ಧಾರವಾಡದ ಅಭಿವೃದ್ಧಿ ದೃಷ್ಟಿಯಿಂದಲೂ ಹಿನ್ನಡೆ ಆಗುತ್ತದೆ. ಅನುದಾನ ಕಡಿತಗೊಳ್ಳುತ್ತದೆ’ ಎಂದರು.

‘ರಾಜ್ಯ ಸರ್ಕಾರವು ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆ ಘೋಷಿಸಿದಾಗ ಕೆಲ ನಾಯಕರು ವೈಯುಕ್ತಿಕವಾಗಿ ನಗರದ ವಿವಿಧೆಡೆ ಬ್ಯಾನರ್ಗಳನ್ನು ಹಾಕಿಸಿದ್ದರು. ಬಿಜೆಪಿ ವತಿಯಿಂದ ಎಲ್ಲಿಯೂ ಬ್ಯಾನರ್ ಹಾಕಿರಲಿಲ್ಲ’ ಎಂದರು.

ಪಾಲಿಕೆ ಸದಸ್ಯ ಶಂಕರ ಶೆಳಕೆ, ಸಮೀರ ಜೋಶಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-24-1733064657

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.