ಧಾರವಾಡ: ‘ವಿಶ್ವದಾದ್ಯಂತ ಯುದ್ಧಭೀತಿ ಮತ್ತು ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತಿರುವ ಇಂದಿನ ಸಂದರ್ಭದಲ್ಲಿ, ಭಾರತೀಯ ಸಾಹಿತ್ಯವು ಮಾನವೀಯ ಮೌಲ್ಯಗಳನ್ನು ಪುನರುಜ್ಜೀವನಗೊಳಿಸಿ ವಿಶ್ವಶಾಂತಿಯ ಸಂದೇಶ ಸಾರಬಲ್ಲ ಶಕ್ತಿಯಾಗಿದೆ’ ಎಂದು ಲೇಖಕಿ ಬಿ.ಟಿ.ಲಲಿತಾ ನಾಯಕ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದ ಮಾನಸೋಲ್ಲಾಸ ಸಭಾಭವನದಲ್ಲಿ ಹಿಂದಿ ಅಧ್ಯಯನ ವಿಭಾಗದ ವತಿಯಿಂದ ಶುಕ್ರವಾರ ನಡೆದ ‘ವಿಶ್ವಶಾಂತಿಗಾಗಿ ಸಮಕಾಲೀನ ಭಾರತೀಯ ಸಾಹಿತ್ಯ ಹಾಗೂ ಪ್ರವಾಸ ಸಾಹಿತ್ಯದ ಕೊಡುಗೆ’ ಕುರಿತು ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಹಿತ್ಯಕಾರರು ಶಾಂತಿಯ ಪರಿಕಲ್ಪನೆಯನ್ನು ವಿಭಿನ್ನ ರೂಪಗಳಲ್ಲಿ ನಿರೂಪಿಸುತ್ತಾರೆ. ರಾಮಾಯಣ, ಮಹಾಭಾರತದಂತಹ ಪುರಾತನ ಕಾವ್ಯಗಳಿಂದ ಹಿಡಿದು ನವೀನ ಸಾಹಿತ್ಯದವರೆಗೂ ಯುದ್ಧ ಮತ್ತು ಶಾಂತಿಯ ವಿವಿಧ ಆಯಾಮಗಳನ್ನು ಸಾಹಿತ್ಯ ಅನಾವರಣಗೊಳಿಸಿದೆ’ ಎಂದು ಹೇಳಿದರು.

‘ಯುದ್ಧವು ಕೇವಲ ಎರಡು ರಾಷ್ಟ್ರಗಳ ನಡುವಿನ ಸಂಘರ್ಷವಲ್ಲ. ಅದು ಜಗತ್ತಿನಾದ್ಯಂತ ಮಾನವ ಸಮಾಜದ ಮೇಲೆ ಪರಿಣಾಮ ಬೀರುವ ದುರಂತ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಾಧನಗಳನ್ನು ವಿನಾಶಕ್ಕಿಂತ ಶಾಂತಿಯ ನಿರ್ಮಾಣಕ್ಕೆ ಬಳಸಬೇಕು’ ಎಂದು ಸಲಹೆ ನೀಡಿದರು.

ಉತ್ತರ ಪ್ರದೇಶದ ಅಂತರರಾಷ್ಟ್ರೀಯ ಸಾಹಿತ್ಯ ಕಲಾ ಮಂಚದ ಸಂಸ್ಥಾಪಕ ಅಧ್ಯಕ್ಷ ಪ್ರೊ.ಮಹೇಶ್ ದಿವಾಕರ್ ಮಾತನಾಡಿ, ಪಾಕಿಸ್ತಾನ, ಬಾಂಗ್ಲಾದೇಶ, ಉಕ್ರೇನ್-ರಷ್ಯಾ ಹಾಗೂ ಇರಾನ್-ಅಮೆರಿಕಾ ನಡುವಿನ ಸಂಘರ್ಷಗಳು ಜಾಗತಿಕ ಯುದ್ಧಭೀತಿಯನ್ನು ಹೆಚ್ಚಿಸುತ್ತಿವೆ. ಇಂತಹ ಸಂದರ್ಭಗಳಲ್ಲಿ ಭಾರತೀಯ ಸಾಹಿತ್ಯ ಮತ್ತು ಪ್ರವಾಸ ಸಾಹಿತ್ಯವು ಮಾನವೀಯ ಸಂಬಂಧಗಳನ್ನು ಬಲಪಡಿಸುವ ಶಕ್ತಿಯನ್ನು ಹೊಂದಿದೆ’ ಎಂದು ತಿಳಿಸಿದರು.

ಕುಲಪತಿ ಪ್ರೊ.ಎ.ಎಂ.ಖಾನ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಎಸ್.ಕೆ.ಪವಾರ್, ಪ್ರೊ.ಅರ್ಜುನ್ ಚೌವಾಣ್, ರಾಜೇಶ್ ಶ್ರೀವಾಸ್ತವ್, ರಾಕೇಶ್ ಗೋಯಲ್, ಸಿಂಡಿಕೇಟ್ ಸದಸ್ಯರಾದ ಬಿ.ಎಲ್. ಗುಂಡೂರ ,ರಾಬರ್ಟ್ ದದ್ದಾಪುರಿ, ಶ್ಯಾಮ ಮಲ್ಲನಗೌಡರ, ಬಸವರಾಜ್ ಗೊರವರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-24-401266696

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.