ಧಾರವಾಡ: ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಗಳಗಿ ಹುಲಕೊಪ್ಪ ಗ್ರಾಮದೇವಿಯರ (ದ್ಯಾಮವ್ವ, ದುರ್ಗವ್ವ) ಜಾತ್ರೆ ಅಂಗವಾಗಿ ಶುಕ್ರವಾರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಪುಷ್ಪಾಲಂಕೃತ ಭವ್ಯ ರಥದಲ್ಲಿ ದ್ಯಾಮವ್ವ, ದುರ್ಗವ್ವ ದೇವಿ ಮೂರ್ತಿ ಪ್ರತಿಷ್ಠಾಪಿಸಿ ಮಧ್ಯಾಹ್ನ 4.50ಕ್ಕರ ಪೂಜೆ ಸಲ್ಲಿಸಲಾಯಿತು. ಬೆಂಗಳೂರಿನ ಗವೀಪುರಂ ಗೋಸಾಯಿ ಮಠದ ಮಂಜುನಾಥ ಭಾರತಿ ಸ್ವಾಮೀಜಿ ಸಹಿತ ವಿವಿಧ ಮಠಾಧೀಶರ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಭಕ್ತರು ’ದ್ಯಾಮವ್ವ, ದುರ್ಗವ್ವ ಉದೋ..ಉದೋ...’, 'ಗ್ರಾಮದೇವತೆಯರಿಗೆ ಜಯವಾಗಲಿ' ಘೋಷಣೆಗಳನ್ನು ಮೊಳಗಿಸಿದರು. ರಥಕ್ಕೆ ಉತ್ತತ್ತಿ, ಬಾಳೆಹಣ್ಣು,ಹೂವು, ಲಿಂಬೆ ಹಣ್ಣು ತೂರಿ ಭಕ್ತಿ ಸಮರ್ಪಿದರು. ಭಜನೆ, ಗೊಂಬೆ ಕುಣಿತ, ಜಗ್ಗಲಗಿ,ಡೊಳ್ಳು ಮೇಳ ಸಹಿತ ಹಲವು ಜನಪದ ಕಲಾತಂಡಗಳ ವಾದ್ಯ ಮೇಳಗಳು ಮೆರಗು ನೀಡಿದವು.

ಶಿವಪೂರ, ಕಣವಿಹೂಲಿಕಟ್ಟಿ,ಬಣದೂರ, ದ್ಯಾಮನಕೊಪ್ಪ, ಕರ್ಲಕೊಪ್ಪ, ಹಸರಂಬಿ, ಅರೆಬಸವನಕೊಪ್ಪ, ಗುಳುನಕೊಪ್ಪ, ಗಂಭ್ಯಾಪೂರ, ಡೊಂಬರಿಕೊಪ್ಪ, ಕಳಸನಕೊಪ್ಪ, ಬಿ-ಬಸವನಕೊಪ್ಪ, ಹೊತ್ತಿಕೋಟಿ, ಹಳ್ಳಿಗೇರಿ, ಅಂಡ್ಲಿಕೊಪ್ಪ, ಮಾವಿನಕೊಪ್ಪ, ಮುರ್ಕವಾಡ, ಅಂಗನಕೊಪ್ಪ, ಮುಂಡವಾಡ, ಮಾರಡಗಿ ಸಹಿತ ಸುತ್ತಲಿನ ಗ್ರಾಮಗಳಿಂದ ಬಂದಿದ್ದ ಭಕ್ತರು ತೇರನ್ನು ಎಳೆದು ಸಂಭ್ರಮಿಸಿದರು.

ದೇವಸ್ಥಾನದ ಬಳಿಯಿಂದ ಹೊರಟ ತೇರು ಆರಿಗೇರಿಯ ಶಿವಾಜಿ ವೃತ್ತದವರೆಗೆ ಸಾಗಿ ಮರಳಿ ವಿರಕ್ತ ಮಠದ ಚೌವತ್ರಿ ಮನೆ ತಲುಪಿ ಸಂಪನ್ನಗೊಂಡಿತು. ರಥೋತ್ಸವ ಸಮಯದಲ್ಲಿ ಅರ್ಧ ಗಂಟೆ ಮಳೆ ಸುರಿಯಿತು.

ಕಲಘಟಗಿಯ ರೇವಣ್ಣಸಿದ್ದೇಶ್ವರ ಸ್ವಾಮೀಜಿ, ರಾಯನಾಳಅಭಿನವ ರೇವಣ ಸಿದ್ದೇಶ್ವರ ಸ್ವಾಮೀಜಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-24-2095169932

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.