ಕುಂದಗೋಳ: ತಾಲ್ಲೂಕಿನಲ್ಲಿ ಬುಧವಾರ ಸಂಜೆ ಭಾರಿ ಗಾಳಿ, ಗುಡುಗು ಸಹಿತ ಮಳೆಯಾಗಿದೆ. ಅಲ್ಲಲ್ಲಿ ಗಿಡ ಮರಗಳು ಬಿದ್ದಿದ್ದು, ಅಂಗಡಿಗಳ ತಗಡು ಹಾರಿ ಹಾನಿ ಉಂಟಾಗಿದೆ.

ತಾಲ್ಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಬೀಡಿ ಅಂಗಡಿ ಹಾಗೂ ಅಂಗನವಾಡಿಯ ತಗಡು ಹಾರಿವೆ. ಹುಬ್ಬಳ್ಳಿ– ಲಕ್ಷ್ಮೇಶ್ವರ ರಸ್ತೆಯ ಶೆರೆವಾಡ ಗ್ರಾಮದ ಹತ್ತಿರದ ಟೋಲ್ ಸಮೀಪದ ಅಂಗಡಿಯೊಂದರ ಮೇಲೆ ಮರ ಉರುಳಿ ಬಿದ್ದಿದೆ. ಗುಡೇನಕಟ್ಟಿ– ಯರಿನಾರಾಯಣಪುರ ರಸ್ತೆ ಮಧ್ಯೆ ಮರವೊಂದು ಉರುಳಿದೆ.

ಪ್ರವಾಸಿ ಮಂದಿರದ ಹತ್ತಿರ ವಿದ್ಯುತ್ ಪರಿವರ್ತಕದ ಮೇಲೆ ಹಾಗೂ ಹೊಂಡದ ಹತ್ತಿರ ವಿದ್ಯುತ್ ತಂತಿ ಮೇಲೆ ಮರದ ಟೊಂಗೆಗಳು ಬಿದ್ದು ಕೆಲವು ಭಾಗಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

ಕಲಘಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಬುಧವಾರ ಮಳೆರಾಯ ಅಬ್ಬರಿಸಿದ್ದು, ಅಲ್ಲಲಿ ವಿದ್ಯುತ್ ಕಂಬಗಳು ಹಾಗೂ ಗಿಡ ಮರಗಳು ನೆಲಕ್ಕೆ ಉರುಳಿವೆ.

ಪಟ್ಟಣದ ಪೊಲೀಸ್ ಠಾಣೆ, ಆಂಜನೇಯ ವೃತ್ತ ಹಾಗೂ ವಿವಿಧ ಕಡೆ ಮರಗಳು, ವಿದ್ಯುತ್ ಕಂಬ ತಂತಿಗಳು ಹರಿದು ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಮಳೆಗಿಂತ ಗಾಳಿಯೇ ಹೆಚ್ಚಾಗಿದ್ದರಿಂದ ಹೆಚ್ಚಿನ ಮರಗಳು ನೆಲಕ್ಕುರುಳಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-24-1813245971

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.