ಗಣೇಶ ವೈದ್ಯ

ಹುಬ್ಬಳ್ಳಿ: ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಣಾಮ ದೇಶದಲ್ಲಿ ಎಲ್ಪಿಜಿ (ದ್ರವೀಕೃತ ಪೆಟ್ರೋಲಿಯಂ ಅನಿಲ) ಕೊರತೆ ಉಂಟಾದ ಬಳಿಕ ಧಾರವಾಡ ಜಿಲ್ಲೆಯಲ್ಲಿ ಪಿಎನ್ಜಿಗೆ (ಕೊಳವೆ ಮೂಲಕ ಪೂರೈಸುವ ನೈಸರ್ಗಿಕ ಅನಿಲ) ಬೇಡಿಕೆ ಹೆಚ್ಚಿದೆ. ಅರ್ಜಿ ಸಲ್ಲಿಕೆ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಮಾರ್ಚ್ ಬಳಿಕ ಹೊಸ ಸಂಪರ್ಕಕ್ಕಾಗಿ 450 ಮನೆಗಳ ಮಾಲೀಕರು, 25 ಕೈಗಾರಿಕೆಗಳು ಮತ್ತು 2 ವಾಣಿಜ್ಯ ಬಳಕೆದಾರರಿಂದ ಅರ್ಜಿ ಸಲ್ಲಿಕೆ ಆಗಿದೆ ಎಂದು ಜಿಲ್ಲೆಯಲ್ಲಿ ಪಿಎನ್ಜಿ ಸೇವೆ ನೀಡುವ ಇಂಡಿಯನ್ ಆಯಿಲ್ ಅದಾನಿ ಗ್ಯಾಸ್ ಪ್ರೈ.ಲಿ. (ಐಒಎಜಿಪಿಎಲ್) ಮೂಲಗಳು ಖಚಿತಪಡಿಸಿವೆ.

ಎರಡು ಎಲ್ಪಿಜಿ ಸಿಲಿಂಡರ್ ಬುಕ್ ಮಾಡುವ ಅವಧಿಯ ನಡುವೆ 45 ದಿನಗಳ ಅಂತರ ಇರಬೇಕು, ಪಿಎನ್ಜಿ ಸಂಪರ್ಕಕ್ಕೆ ಅವಕಾಶ ಇರುವ ಕಡೆಗಳಲ್ಲಿ ಕಡ್ಡಾಯವಾಗಿ ಸಂಪರ್ಕ ಪಡೆದುಕೊಳ್ಳಬೇಕು ಎಂಬೆಲ್ಲ ನಿಯಮಗಳನ್ನು ಕೇಂದ್ರ ಸರ್ಕಾರ ರೂಪಿಸುತ್ತಿದ್ದಂತೆ ಅವಳಿ ನಗರದ ಜನರು, ಕೊಳವೆ ಮೂಲಕ ನಿರಂತರವಾಗಿ ಬರುವ ಅನಿಲದತ್ತ ಗಮನ ಹರಿಸಿದ್ದಾರೆ. ಅರ್ಜಿ ಸಲ್ಲಿಸಿದ ಬಳಿಕ ಗರಿಷ್ಠ ಮೂರು ತಿಂಗಳಲ್ಲಿ ಸಂಪರ್ಕ ನೀಡಲಾಗುತ್ತಿದೆ.

ಹುಬ್ಬಳ್ಳಿಯ ಬೆಂಗೇರಿ, ಕೇಶ್ವಾಪುರ, ಲಿಂಗರಾಜನಗರ, ಶಿರೂರು ಪಾರ್ಕ್, ಮಂಜುನಾಥ ನಗರ, ಗೋಕುಲ ಕೈಗಾರಿಕಾ ವಲಯ, ಧಾರವಾಡದ ಗಾಂಧಿ ನಗರ, ಬೇಲೂರು ಹಾಗೂ ರಾಯಾಪುರ ಕೈಗಾರಿಕಾ ವಲಯ ಸೇರಿ ಪ್ರಮುಖ ಬಡಾವಣೆಗಳಲ್ಲಿ ಈಗಾಗಲೇ ಪಿಎನ್ಜಿ ಆಯ್ಕೆ ಲಭ್ಯವಿದೆ. ತಾರಿಹಾಳ ಕೈಗಾರಿಕಾ ವಲಯಕ್ಕೆ ಸಂಪರ್ಕ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ. ಸದ್ಯ ಕೊಳವೆ ಮಾರ್ಗ ಇರುವ ಬಡಾವಣೆಗಳ ನಿವಾಸಿಗಳಿಂದ ಮಾತ್ರ ಅರ್ಜಿ ಸ್ವೀಕರಿಸಲಾಗುತ್ತಿದೆ. ಆದರೆ ಕ್ರಮೇಣ ಜಿಲ್ಲೆಯ ಎಲ್ಲ ಬಡಾವಣೆಗಳಿಗೆ ಸಂಪರ್ಕ ಜಾಲ ವಿಸ್ತರಿಸುವ ಕಾರ್ಯ ಭರದಿಂದ ಸಾಗಿದೆ.

‘ಈಗ ಎಲ್ಪಿಜಿ ಬೆಲೆ ಹೆಚ್ಚಳವಾಗಿದೆ. ಅದಕ್ಕೆ ಹೋಲಿಸಿದರೆ ವಾಣಿಜ್ಯ, ಕೈಗಾರಿಕೆ ಮತ್ತು ಮನೆ ಬಳಕೆ ಎಲ್ಲ ದೃಷ್ಟಿಯಿಂದಲೂ ಪಿಎನ್ಜಿ ಲಾಭದಾಯಕ. ಹೊಸ ಸಂಪರ್ಕ ಬಯಸುವವರು ಕಂಪನಿಯ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಕಚೇರಿಗೂ ನೇರವಾಗಿ ಭೇಟಿ ನೀಡಬಹುದು’ ಎಂದು ಐಒಎಜಿಪಿಎಲ್ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಚೇತನ್ ಯಾದವ್ ತಿಳಿಸಿದರು.

‘ಸುರಕ್ಷತೆ ದೃಷ್ಟಿಯಿಂದಲೂಪಿಎನ್ಜಿ ಬಳಕೆ ಉತ್ತಮ. ಈ ವಿಷಯದಲ್ಲಿ ಜನರಲ್ಲಿ ಅರಿವು ಮೂಡಿಸುತ್ತಿದ್ದೇವೆ. ಹಲವು ಪ್ರಮುಖ ಹೋಟೆಲ್ಗಳು ಪಿಎನ್ಜಿ ಜಾಲವನ್ನು ಸೇರಿಕೊಂಡಿವೆ. ಇನ್ನೂ ಕೆಲವರು ಎಲ್ಪಿಜಿ ಕೊರತೆ ಬಳಿಕ ಅರ್ಜಿ ಸಲ್ಲಿಸಿದ್ದಾರೆ. ಇನ್ಆರ್ಬಿಟ್ ಮಾಲ್ನಲ್ಲಿರುವ ಎಲ್ಲ ಆಹಾರ ಮಳಿಗೆಗಳು ಸೇರಿದಂತೆ ಸಾಕಷ್ಟು ಬೃಹತ್ ಕೈಗಾರಿಕೆಗಳು ಕೂಡ ಸಂಪರ್ಕ ಪಡೆದಿವೆ’ ಎಂದು ಅವರು ವಿವರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-24-956534124

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.