ಉಪ್ಪಿನಬೆಟಗೇರಿ: ‘ಗುಡುಗು ಮಿಂಚು ಬಾಳೈತ್ರಿಪೋ... ಮಳಿ–ಬೆಳಿ ಸಂಪೈತ್ರಿಪೋ... ಹವಳಾ–ಮುತ್ತು ಉದರತಾವ್ರಿಪೋ...ಮನಿ ಮನಿಯೊಳಗ ಜಗಳ ಅಕ್ಕಾವ್ರಿಪೋ...ರೈತರು ಎಲ್ಲಾರೂ ಕೂಡಿ ಚೆಂದಾಗಿ ಜಾತ್ರಿ ಮಾಡ್ರಿಪೋ...’

ಸಮೀಪದ ಮರೇವಾಡ ಗ್ರಾಮದ ಬಸವಣ್ಣ (ನಂದೀಶ್ವರ) ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ನಡುವೆ ರಥೋತ್ಸವದ ಕೊನೆಯಲ್ಲಿ ಅಮ್ಮಿನಬಾವಿ ಬಸವಣ್ಣ ದೇವಾಲಯದ ಪ್ರಧಾನ ಅರ್ಚಕ ಬಸವರಾಜ ಪೂಜಾರ ಹೀಗೆ ಕಾರ್ಣಿಕ ನುಡಿದರು.

ರಥೋತ್ಸವ: ಅಮ್ಮಿನಬಾವಿ ಗ್ರಾಮದಿಂದ ಬಸವಣ್ಣ ದೇವರ ಪಲ್ಲಕ್ಕಿ ಹಾಗೂ ನಂದಿಕೋಲುಗಳನ್ನು ಮೆರವಣಿಗೆ ಮೂಲಕ ಮರೇವಾಡ ಬಸವಣ್ಣ ದೇವರ ದೇವಸ್ಥಾನಕ್ಕೆ ತರಲಾಯಿತು.

ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ವಾದ್ಯಮೇಳದೊಂದಿಗೆ ರಥವನ್ನು ಹೆದ್ದಾರಿ ಬಳಿಯ ಮಹಾದ್ವಾರದ ತನಕ ಭಕ್ತರು ಎಳೆದು, ನಂತರ ಮೂಲ ಸ್ಥಳಕ್ಕೆ ತಂದರು. ತೇರಿಗೆ ಬಾಳೆಹಣ್ಣು, ನಿಂಬೆ, ಉತ್ತುತ್ತಿ ಎಸೆದು ಭಕ್ತಿ ಸಮರ್ಪಿಸಿದರು. ಬೆಳಿಗ್ಗೆ ಬಸವಣ್ಣ ದೇವರ ಮೂರ್ತಿಗೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಪುಷ್ಪಾಲಂಕಾರ, ಪೂಜೆ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-24-1407003702

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.