ಧಾರವಾಡ: ಹಳೆಯ ಕಾಲದ ನಾಣ್ಯಗಳು ಇತಿಹಾಸದ ಪರಂಪರೆಯ ಗತವೈಭವವನ್ನು ತಿಳಿಸುತ್ತವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರನಗೌಡ ಹೇಳಿದರು.

ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲಾ ಬಾಲ ಭವನದಲ್ಲಿ ಆಯೋಜಿಸಿರುವ ಮಕ್ಕಳ ಬೇಸಿಗೆ ಶಿಬಿರದಲ್ಲಿ ಹಳೆಯ ನಾಣ್ಯ ಹಾಗೂ ನೋಟುಗಳ ಪ್ರದರ್ಶನದಲ್ಲಿ ಮಾತನಾಡಿದರು.

ನಾಣ್ಯಗಳು, ನೋಟುಗಳು ಹಿಂದಿನ ಕಾಲದ ಆರ್ಥಿಕ ಸ್ಥಿತಿ ತಿಳಿಸುವ ದಾಖಲೆಗಳು. ಮಕ್ಕಳಿಗೆ ಅವುಗಳ ವೈಶಿಷ್ಟ್ಯಗಳನ್ನು ಪರಿಚಯಿಸಬೇಕು ಎಂದರು.

ನಾಣ್ಯ ಸಂಗ್ರಹಕಾರ ಸುನೀಲ್ ಕಮ್ಮಾರ ಮಾತನಾಡಿ, ‘18 ದೇಶ ವಿದೇಶಗಳ ವಿಭಿನ್ನ ನಾಣ್ಯ ನೋಟುಗಳ ಸಂಗ್ರಹಿಸಿಡಲಾಗಿದೆ. ಇಂದಿನ ಆನ್ಲೈನ್ ಯುಗದಲ್ಲಿ ಹಳೆಯ ಕಾಲದ ನೋಟು ನಾಣ್ಯಗಳ ಕಲೆ, ಪರಂಪರೆ ನಶಿಸಿ ಹೋಗಬಾರದು ಎಂದು ಪ್ರದರ್ಶನ ಆಯೋಜಿಸಿ ಅವುಗಳ ಕುರಿತು ಪರಿಚಯಿಸಲಾಗುತ್ತಿದೆ. ಹಿರಿಯರಿಗೆ, ಯುವಜನರಿಗೆ, ವಿದ್ಯಾರ್ಥಿಗಳಿಗೆ, ನಾಣ್ಯ ಮತ್ತು ನೋಟುಗಳ ಮಹತ್ವ ತಿಳಿಸುವ ಕೆಲಸದಲ್ಲಿ ತೊಡಗಿದ್ದೇನೆ’ ಎಂದು ತಿಳಿಸಿದರು.

ಜಿಲ್ಲಾ ನಿರೂಪಣಾಧಿಕಾರಿ ಕಮಲಾ ಬೈಲೂರ, ಸಂಪನ್ಮೂಲ ವ್ಯಕ್ತಿ ಬಸವರಾಜ ಗುಡ್ಡಪ್ಪನವರ, ವಿಜಯಲಕ್ಷ್ಮಿ ಪಾಟೀಲ, ಮೈತ್ರಾ ಬನ್ನಿಕೊಪ್ಪ,ಲಕ್ಷ್ಮಿ ದೇವರಹುಬ್ಬಳ್ಳಿ, ರಕ್ಷಿತಾ ಕುಂದಗೋಳ, ಶಶಿಧರ ಮುಂದಿನಮನಿ, ನಿರ್ಮಲಾ ಭುಜಂಗನವರ, ಅಶೋಕ ಬೆಳ್ಳಿಗಟ್ಟಿ, ಯಶೋದಾ ಭಜಂತ್ರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-24-1626612741

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.