ಧಾರವಾಡ: ‘ಜಿಲ್ಲಾ ಗ್ರಾಹಕರ ಆಯೋಗವು ವಂಚನೆ ಪ್ರಕರಣದಲ್ಲಿ ಆರೋಪಿ ಹುಬ್ಬಳ್ಳಿಯ ಪೃಥ್ವಿ ಬಿಲ್ಡರ್ ಮತ್ತು ಡೆವಲಪರ್ಸ್ ಪಾಲುದಾರ ಶಿವನಗೌಡ ಆರ್. ಪಾಟೀಲ ಅವರ ಬಂಧನಕ್ಕೆ ಆದೇಶ ಹೊರಡಿಸಿದ್ದರೂ ಪೊಲೀಸರು ಕ್ರಮ ವಹಿಸಿಲ್ಲ’ ಎಂದು ನಿವೃತ್ತ ಸೈನಿಕ ಚಿಂತಾಮಣಿ ಸುರಪುರ ದೂರಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಆರೋಪಿಯನ್ನು ಬಂಧಿಸುವಂತೆ ವಿದ್ಯಾನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ಗೆ ಮಾರ್ಚ್ 14ರಂದು ಮನವಿ ಸಲ್ಲಿಸಿದ್ದೇವೆ. ಆರೋಪಿ ಸಿಕ್ಕಿಲ್ಲ, ನಿಮಗೆ ಸಿಕ್ಕರೆ ತಿಳಿಸಿ ಎಂದು ನಮಗೇ ಹೇಳಿದ್ದಾರೆ. ಪೊಲೀಸರಿಂದ ಜವಾಬ್ದಾರಿಯುತ ನೆರವು ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಶಿವನಗೌಡ ಅವರು ತಾಲ್ಲೂಕಿನ ತಡಸಿನಕೊಪ್ಪ ಭಾಗದಲ್ಲಿ ಮೂರನೇ ಹಂತದಲ್ಲಿ ಬಡಾವಣೆ ಅಭಿವೃದ್ಧಿ ನಿವೇಶನ ನೀಡುವುದಾಗಿ ಕಂತುಗಳಲ್ಲಿ ಹಣ ಪಡೆದಿದ್ದಾರೆ. 15 ಮಂದಿ ₹ 1.82 ಕೋಟಿ ಹಣ ಪಡೆದಿದ್ದಾರೆ. ನಂತರ, ನಿವೇಶನ ನೀಡಿಲ್ಲ. ಬಿಲ್ಡರ್ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ನೀಡಿದ್ದೇವೆ. ಆಯೋಗ ವಿಚಾರಣೆ ನಡೆಸಿ ಆರೋಪಿ ಬಂಧನಕ್ಕೆ ಆದೇಶ ನೀಡಿದೆ’ ಎಂದರು.

‘ಪೊಲೀಸ್ ಇಲಾಖೆ ಮೇಲಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಜನಪ್ರತಿನಿಧಿಗಳು ನ್ಯಾಯ ದೊರಕಿಸಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.